ಬಂಟ್ವಾಳ: ಇದು ಬಿ.ಸಿ.ರೋಡ್ – ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ದುರವಸ್ಥೆ. ಲಾರಿಗಳೆರಡು ಕೆಸರಲ್ಲಿ ಹೂತು ಹೋಗಿ ಮೇಲೆತ್ತಲು ಎರಡೆರಡು ಹಿತಾಚಿ ಬಳಸಿ ಹರಸಾಹಸ ಪಟ್ಟರೂ ಸಾಧ್ಯವಾಗಿಲ್ಲ!

 


ಬಿಸಿರೋಡು- ಪುಂಜಾಲಕಟ್ಟೆ ವರೆಗೆ ಚತುಷ್ಪತ ಕಾಮಗಾರಿ ನಡೆಯುತ್ತಿದ್ದು, ಮಳೆಗಾಲ ಆರಂಭವಾದರೂ ಕಾಮಗಾರಿ ಮುಗಿಯಲಿಲ್ಲ. ಸಂಚಾರಕ್ಕೆ ಬದಲಿ ರಸ್ತೆಯಿಲ್ಲ. ಘನವಾಹನಗಳು ಈ ರಸ್ತೆಯಲ್ಲಿ ಸಂಚಾರ ಮಾಡಿದರೆ ಅಲ್ಲಿಗೆ ಕಥೆ ಮುಗಿಯಿತು. ಒಂದು ಕಡೆ ವಾಹನಗಳ ಹೂತು ಹೋದರೆ, ಇನ್ನೊಂದೆಡೆ ರಸ್ತೆಯಂತಿರುವ ರಸ್ತೆಯಲ್ಲಿ ತುಂಬಾ ಕೆಸರು.
ಇದು ಮಳೆಗಾಲ ಆರಂಭಿಕ ದಿನಗಳು. ಇನ್ನು ಕಾಮಗಾರಿ ಮುಗಿಯುವವರೆಗೂ ಏನು ಕಥೆ  ದೇವರಿಗೆ ಗೊತ್ತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here