Tuesday, October 17, 2023

ನಾಳೆ ಕಂಕಣ ಸೂರ್ಯಗ್ರಹಣ

Must read

ಬಂಟ್ವಾಳ: ದೇಶದಲ್ಲಿ ಈಗಾಗಲೇ ಎರಡು ಚಂದ್ರಗ್ರಹಣಗಳನ್ನು ಕಂಡು ಈ ಆದಿತ್ಯವಾರ (ನಾಳೆ) ವರ್ಷದ ಮೊದಲ ಸೂರ್ಯಗ್ರಹಣ ಗೋಚರಿಸಲಿದೆ.

ಸುಮಾರು 6 ಗಂಟೆಗಳ ಕಾಲ ಕಂಕಣ ಸೂರ್ಯಗ್ರಹಣವನ್ನು ಕಣ್ತುಂಬಿಕೊಳ್ಳುವ ಅವಕಾಶ ಭಾರತ ಸೇರಿದಂತೆ ಜಗತ್ತಿನ ಹಲವು ಪ್ರದೇಶಗಳ ಜನರಿಗೆ ಸಿಕ್ಕಿದೆ.

ಗ್ರಹಣ ಜೂನ್‌ 21ರ ಭಾನುವಾರ ದಂದು ಸಮಯ: ಬೆಳಗ್ಗೆ 9.15ಕ್ಕೆ ಆರಂಭ,  12.10ರ ವೇಳೆಗೆ ಪೂರ್ಣ, ಮಧ್ಯಾಹ್ನ 3.04ಕ್ಕೆ ಅಂತ್ಯ. ಒಟ್ಟಾರೆ ಗ್ರಹಣದ ಅವಧಿ: 6 ಗಂಟೆಗಳು.

ಎಲ್ಲೆಲ್ಲಿ ಗೋಚರ?
ಭಾರತ, ಆಫ್ರಿಕನ್‌ ರಿಪಬ್ಲಿಕ್‌, ಕಾಂಗೋ, ಇಥಿಯೋಪಿಯಾ, ಪಾಕಿಸ್ತಾನ ಮತ್ತು ಚೀನ

ಭಾರತದಲ್ಲಿ
ರಾಜಸ್ಥಾನ, ಹರ್ಯಾಣ ಮತ್ತು ಉತ್ತರಾಖಂಡದಲ್ಲಿ ಖಂಡಗ್ರಾಸ ಗ್ರಹಣ ಹಾಗೂ ಉಳಿದೆಡೆ ಭಾಗಶಃ ಗ್ರಹಣ ಗೋಚರ

ಮುನ್ನೆಚ್ಚರಿಕೆ ಕ್ರಮಗಳು
ದೇಶದ ಕೆಲವೆಡೆ ಖಂಡಗ್ರಾಸ, ಮತ್ತೆ ಕೆಲವೆಡೆ ಭಾಗಶಃ ಸೂರ್ಯಗ್ರಹಣ ಗೋಚರಿಸಲಿದೆ. ಇದನ್ನು ಬರಿಗಣ್ಣಿನಿಂದ ನೋಡಲೇಬಾರದು. ಸುರಕ್ಷಾ ಕನ್ನಡಕ ಧರಿಸಿ ಅಥವಾ ಪರೋಕ್ಷ ವೀಕ್ಷಣಾ ವಿಧಾನಗಳನ್ನು ಅನುಸರಿಸಿಯೇ ಈ ಗ್ರಹಣವನ್ನು ಕಣ್ತುಂಬಿಕೊಳ್ಳಬಹುದು.

ಮುಂದಿನ ಸೂರ್ಯಗ್ರಹಣ ಯಾವಾಗ?
ಮುಂದಿನ ಸೂರ್ಯಗ್ರಹಣವು ಡಿಸೆಂಬರ್‌ 14 – 15ರಂದು ಸಂಭವಿಸಲಿದೆ. ಅದು ಸಂಪೂರ್ಣ ಸೂರ್ಯಗ್ರಹಣವಾಗಿರಲಿದ್ದು, ಚಂದ್ರನು ಸಂಪೂರ್ಣವಾಗಿ ಸೂರ್ಯನನ್ನು ಆವರಿಸಿಕೊಳ್ಳುತ್ತಾನೆ. ಈ ಖಗೋಳ ವಿದ್ಯಮಾನವು ಚಿಲಿ ಮತ್ತು ಅರ್ಜೆಂಟೀನಾದ ಕೆಲವು ಭಾಗಗಳಲ್ಲಿ ಗೋಚರಿಸಲಿದೆ.

More articles

Latest article