ನವದೆಹಲಿ : ದೇಶದಲ್ಲಿ ಕೊವಿಡ್-೧೯ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ ೨೪ ಗಂಟೆಗಳಲ್ಲಿ 14,516 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 375 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು 3,95,048 ಕೊರೊನಾ ಪ್ರಕರಣ ವರದಿಯಾಗಿದ್ದು, ಸೋಂಕಿಗೆ ಬಲಿಯಾದವರ ಸಂಖ್ಯೆ 12,948 ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಸೋಂಕು ಪ್ರಕಣಗಳು ಹೆಚ್ಚುತ್ತಿರುವ ನಡುವೆ ಕೊವಿಡ್ ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚು. ಈವರೆಗೆ 2,13,831 ಮಂದಿ ಕೊವಿಡ್ ಮುಕ್ತರಾಗಿ ‌ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ದೇಶದಲ್ಲಿ ಒಟ್ಟು 1,68,269 ಸಕ್ರಿಯ ಪ್ರಕರಣಗಳಿವೆ. ಶೇ.54.1 ರಷ್ಟು ಸೋಂಕಿತರು ಕೊರೊನಾದಿಂದಾಗಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಅಧಿಕ ಕೊರೊನಾ ಪ್ರಕರಣಗಳು ದೃಢಪಟ್ಟಿರುವ ಮಹಾರಾಷ್ಟ್ರದಲ್ಲಿ 1,24,331 ಜನರಿಗೆ ಸೋಂಕು ತಗುಲಿದ್ದು, 5,893 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 62,773 ಮಂದಿ ಗುಣಮುಖರಾಗಿದ್ದು 55,665 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ 8281 ಮಂದಿಗೆ ಸೋಂಕು ದೃಢಪಟ್ಟಿದ್ದು 124 ಮಂದಿ ಸಾವನ್ನಪ್ಪಿದ್ದಾರೆ. 2947 ಸಕ್ರಿಯ ಪ್ರಕರಣಗಳಾಗಿದ್ದು 5210 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನುಳಿದಂತೆ

ತಮಿಳುನಾಡಿನಲ್ಲಿ 54,449, ದೆಹಲಿಯಲ್ಲಿ 53,116, ಗುಜರಾತ್‌ನಲ್ಲಿ 26,141 , ಉತ್ತರ ಪ್ರದೇಶದಲ್ಲಿ 15785, ರಾಜಸ್ತಾನದಲ್ಲಿ 14156, ಮಧ್ಯಪ್ರದೇಶದಲ್ಲಿ 11582, ಪಶ್ಚಿಮ ಬಂಗಾಳದಲ್ಲಿ 13090 ಕೊರೊನಾ ಪ್ರಕರಣಗಳು ದಾಖಲಾಗಿರುವ ಬಗ್ಗೆ ವರದಿಯಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here