ಬಂಟ್ವಾಳ: ಬಂಟ್ವಾಳ ವಲಯದ ನಾವೂರು ಯಶಸ್ವಿ ಜ್ಞಾನವಿಕಾಸ ಕೇಂದ್ರದ ತಿಂಗಳ ಮಾಹಿತಿ ಕಾರ್ಯಕ್ರಮ ನಾವೂರು ಜ್ಞಾನವಿಕಾಸ ಕೇಂದ್ರದಲ್ಲಿ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಮಣಿ ಅವರು ವಹಿಸಿದ್ದರು. ನಾವೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಮೀನಾಕ್ಷಿ ಅವರು ಕೋವಿಡ್ – 19 ಪಿಡುಗಿನ ವಿರುದ್ಧ ಮುಂಜಾಗೃತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ನಾವೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀರಚನ ಅವರು ಜ್ಞಾನವಿಕಾಸ ಕೇಂದ್ರ ಸದಸ್ಯರಿಗೆ ಮಾಸ್ಕ್ ತರಿಸಿ ಉಪಯೋಗಿಸುವ ಮಹತ್ವ ಮತ್ತು ಅಗತ್ಯದ ಬಗ್ಗೆ ತಿಳಿಸಿದರು.
ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಸಪ್ನಾ ಬಂಟ್ವಾಳ ವಲಯ ಮೇಲ್ವಿಚಾರಕಿ ಹೇಮಲತಾ ಉಪಸ್ಥಿತರಿದ್ದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here