



ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ವತಿಯಿಂದ ಕ್ಷೇತ್ರ ಅಧ್ಯಕ್ಷ ದೇವಪ್ಪ ಪೂಜಾರಿ ನೇತೃತ್ವದಲ್ಲಿ ಮಾಸ್ಕ್ ದಿನಾಚರಣೆಯ ನಡಿಗೆ ಕಾರ್ಯಕ್ರಮ ಬಿ.ಜೆ.ಪಿ ಕಚೇರಿಯಿಂದ ನಾರಾಯಣ ಗುರು ವೃತ್ತದವರೆಗೆ ನಡೆಯಿತು.
ಈ ಜಾಥದಲ್ಲಿ ನೂರಾರು ಬಿ.ಜೆ.ಪಿ ಕಾರ್ಯಕರ್ತರು ಭಾಗಿಯಾಗಿದ್ದರು, ಈ ಸಂದರ್ಭದಲ್ಲಿ ಕ್ಷೇತ್ರ ಅಧ್ಯಕ್ಷ ದೇವಪ್ಪ ಪೂಜಾರಿ ಅವರು ಕೋವಿಡ್-19 ನಿಯಂತ್ರಣಕ್ಕೆ ಜನತೆ ಮಾಸ್ಕ್ನ್ನು ಕಡ್ಢಾಯವಾಗಿ ಧರಿಸಿ ಸಾಮಾಜಿಕ ಅಂತರ ಕಾಯ್ದು ಕೊಳ್ಳವ ಮೂಲಕ ಕೋರೋನವನ್ನು ನಿಯಂತ್ರಿಸಬಹುದು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಾಗೂ ಆರ್ಯೋಗ ಇಲಾಖೆ ಮಾರ್ಗ ಸೂಚಿಯನ್ನಯ ಪಾಲನೆ ಮಾಡಬೇಕು. ರಾಜ್ಯ ಸರ್ಕಾರ ಇದೀನ ಮಾಸ್ಕ್ ದಿನಾಚರಣೆ ಮಾಡುವ ಮೂಲಕ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಪಕ್ಷದ ವತಿಯಿಂದ ಈ ನಡಿಗೆ ಕಾರ್ಯಕ್ರಮವನ್ನು ನಡೆದಿದೆ ಎಂದರು.
ರಾಜ್ಯ ಕ್ಲಿಯೊನಿಕ್ಸ್ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡುತ್ತಾ, ಕೊವೀಡ್-19 ಮಹಾಮಾರಿ ವಿರುದ್ದ ಮಾಸ್ಕ್ ಧರಿಸುವ ಮುಖಾಂತರ ಜಾಗೃತಿ ಮೂಡಿಸುವಂತ ಕೆಲಸ ಆಗಬೇಕಾಗಿದೆ. ಆ ನಿಟ್ಟಿನಲ್ಲಿ ಜನತೆ ಸಂಪೂರ್ಣ ಸಹಕಾರ ನೀಡಬೇಕೆಂದರು. ಜಿ.ಪಂ. ಸದಸ್ಯ ತುಂಗಪ್ಪ ಬಂಗೇರ, ಜಿಲ್ಲಾ ಮೋರ್ಚಾಗಳ ಡಿಜಿಟಲ್ ಸಂಚಾಲಕ ಸಂದೇಶ್ ಶೆಟ್ಟಿ, ಪ್ರ.ಕಾರ್ಯದಶಿ ಯಾದ ಡೊಂಬಯ್ಯ ಅರಳ, ರವೀಶ್ ಶೆಟ್ಟಿ, ರಮನಾಥ ರಾಯಿ, ಗಣೇಶ್ ರೈ, ಪುರುಷೋತ್ತಮ ಶೆಟ್ಟಿ, ಪ್ರಕಾಶ್ ಅಂಚನ್, ಯಶೋಧರ ಕರ್ಬೆಟು, ಮೋನಪ್ಪ ದೇವಸ್ಯ, ಸುದರ್ಶನ್ ಬಜ, ಪ್ರದೀಪ್ ಅಜ್ಜಿಬೆಟ್ಟು, ಭಾರತಿ ಚೌಟ, ಚಂದ್ರಾವತಿ ಪೊಳಲಿ, ಹಾಗೂ ಕ್ಷೇತ್ರ ಪದಾಧಿಕಾರಿಗಳು, ಕ್ಷೇತ್ರ ಮೋರ್ಚಾಗಳ ಅಧ್ಯಕ್ಷ, ಪ್ರ.ಕಾರ್ಯದಶಿಗಳು, ಶಕ್ತಿ ಕೇಂದ್ರದ ಪ್ರಮುಖರು, ಹಾಗೂ ವಿವಿಧ ಜವಾಬ್ದಾರಿ ಇರುವ ಪ್ರಮುಖರು, ಜನಪ್ರತಿನಿದಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.





