Tuesday, October 31, 2023

ಕಲ್ಲಡ್ಕ: ಜ್ಞಾನವಿಕಾಸ ಸದಸ್ಯರಿಗೆ ಮಾಸ್ಕ್ ವಿತರಣೆ ಹಾಗೂ ಕೋವಿಡ್ -19 ಬಗ್ಗೆ ಮಾಹಿತಿ ಕಾರ್ಯಕ್ರಮ

Must read

ಬಂಟ್ವಾಳ: ವಿಟ್ಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್( ರಿ) ಹಾಗೂ ಕಲ್ಲಡ್ಕ ಜಾನ್ಸಿ ರಾಣಿ ಲಕ್ಷ್ಮೀ ಮಹಿಳಾ ಮಂಡಳಿ (ರಿ) ಇವರ ಸಹಯೋಗದಲ್ಲಿ ಜ್ಞಾನವಿಕಾಸ ಸದಸ್ಯರಿಗೆ ಮಾಸ್ಕ್ ವಿತರಣೆ ಹಾಗೂ ಕೋವಿಡ್ -19 ಬಗ್ಗೆ ಮಾಹಿತಿ ಕಾರ್ಯಕ್ರಮ ನೇತಾಜಿ ಯುವಕ ಮಂಡಲ ಕಲ್ಲಡ್ಕದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ವಿಟ್ಲ ಯೋಜನಾ ಕಚೇರಿ ಯೋಜನಾಧಿಕಾರಿ ಮೋಹನ್ ಕೆ. ಕಾರ್ಯಕ್ರಮದ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ವೀರೇಶ್ ಅವರು ಕೋವಿಡ್ 19 ಬಗ್ಗೆ ಹಾಗೂ ಡೆಂಗ್ಯೂ ಜ್ವರದ ಬಗ್ಗೆ  ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾನ್ಸಿ ರಾಣಿ ಲಕ್ಷ್ಮೀ ಮಹಿಳಾ ಮಂಡಳಿ ಅಧ್ಯಕ್ಷೆ ಮೀನಾಕ್ಷಿ ಆರ್. ಪೂಜಾರಿ ವಹಿಸಿ, 50 ಮಂದಿ ಸದಸ್ಯರಿಗೆ ಉಚಿತ ಮಾಸ್ಕ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಸಮನ್ವಯಾಧಿಕಾರಿ ನಳಿನಾಕ್ಷಿ ಶೆಟ್ಟಿ, ಮೇಲ್ವಿಚಾರಕಿ ಪ್ರೇಮ, ಸೇವಾ ಪ್ರತಿನಿಧಿ ಎವ್ಲೀನ್, ಒಕ್ಕೂಟದ ಉಪಾಧ್ಯಕ್ಷೆ ಅರುಣಾಕ್ಷಿ ಹಾಗೂ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.

More articles

Latest article