



ಬಂಟ್ವಾಳ: ಶ್ರೀರಾಮ ಮಂದಿರ, ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಕಲ್ಲಡ್ಕ ವತಿಯಿಂದ ಭಾರತ ಮತ್ತು ಚೀನಾ ಮಧ್ಯೆ ನಡೆದಂತಹ ಘರ್ಷಣೆಯಲ್ಲಿ ಹುತಾತ್ಮರಾದ ನಮ್ಮ ದೇಶದ ವೀರ ಸೈನಿಕರಿಗೆ ಭಾವಪೂರ್ಣ ಶ್ರದ್ಧಾಂಜಲಿ ಆರ್ಪಿಸುವ ಕಾರ್ಯಕ್ರಮ ನಡೆಯಿತು. ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಶ್ರದ್ಧಾಂಜಲಿ ಸಮರ್ಪಿಸಿ, ಜನ ಜಾಗೃತಿಯ ಬಗ್ಗೆ ಮಾತನಾಡಿದರು.
ಸಾಮಾಜಿಕ ಅಂತರದಲ್ಲಿ ಕಾರ್ಯಕ್ರಮ ನಡೆಯಿತು. ಶ್ರೀರಾಮ ಮಂದಿರದ ಟ್ರಸ್ಟ್ ಸದಸ್ಯರಾದ ಕಮಲಾ ಪ್ರಭಾಕರ್ ಭಟ್, ನಾಗೇಶ್, ಚೆನ್ನಪ್ಪ ಆರ್ ಕೋಟ್ಯಾನ್, ಕೆ ಕೃಷ್ಣಪ್ಪ, ಸುಜಿತ್ ಕೊಟ್ಟಾರಿ, ಬಾಳ್ತಿಲ ಪಂಚಾಯತ್ ಮಾಜಿ ಅಧ್ಯಕ್ಷರಾದ ವಿಠಲ ನೆಲ್ಲಿ. ಹಿಂದುಜಾಗರಣ ವೇದಿಕೆಯ ರತ್ನಾಕರ ಶೆಟ್ಟಿ, ಭಜರಂಗದಳ ಸಂಚಾಲಕರಾದ ಮಿಥುನ್ ಪೂಜಾರಿ, ವಿಶ್ವಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಪದ್ಮನಾಭ ಕಟ್ಟೆ ಸಂಘಟೆನೆಯ ಸದಸ್ಯರು ಉಪಸ್ಥಿತರಿದ್ದರು.






