Thursday, October 19, 2023

ಭಾರತ- ಚೀನಾ ಫೈರಿಂಗ್ :ಭಾರತದ ಮೂವರು ಯೋಧರನ್ನು ಹತ್ಯೆಗೈದ ಚೀನಾ ಸೈನಿಕರು

Must read

ನವದೆಹಲಿ : ಭಾರತ – ಚೀನಾ ಗಡಿಯಲ್ಲಿ ಎರಡೂ ದೇಶದ ಸೈನಿಕರ ನಡುವಿನ ಸಂಘರ್ಷದಲ್ಲಿ ಮೂವರು ಭಾರತೀಯರು ಯೋಧರು ಹುತಾತ್ಮರಾಗಿದ್ದಾರೆ ಎಂದು ವರದಿಯಾಗಿದೆ.

ಭಾರತ-ಚೀನಾ ಗಡಿ ಪ್ರದೇಶ, ಗಾಲ್ವಾನ್ ಗಡಿಯಲ್ಲಿ ನಿನ್ನೆ ರಾತ್ರಿ ಚೀನಾ-ಭಾರತ ಸೈನಿಕರ ನಡುವೆ ಸಂಘರ್ಷ ನಡೆದಿದ್ದು, ಭಾರತದ ಓರ್ವ ಅಧಿಕಾರಿ ಸೇರಿದಂತೆ ಮೂವರು ಯೋಧರು ಹುತಾತ್ಮರಾಗಿದ್ದಾರೆ ಎಂಬ ಮಾಹಿತಿ ದೊರಕಿದೆ.

ಇದಕ್ಕೆ ಉತ್ತರವಾಗಿ ಭಾರತೀಯ ಸೈನ್ಯ ಚೀನಾ ಸೇನೆಯ ಮೇಲೆ ದಾಳಿ ನಡೆಸಿ, ಐವರು ಸೈನಿಕರನ್ನು ಹೊಡೆದುರುಳಿಸಿ, 11 ಸೈನಿಕರು ಗಾಯಗೊಂಡಿರುವ ಬಗ್ಗೆ ಮಾಹಿತಿ ಇದೆ

ಭಾರತ-ಚೀನಾ ಸಂಘರ್ಷದ ಹಿನ್ನೆಲೆ ಗಾಲ್ವಾನ್ ಕಣಿವೆಯಲ್ಲಿ ಪರಿಸ್ಥಿತಿ ಶಾಂತಗೊಳಿಸಲು ಭಾರತ-ಚೀನಾ ಹಿರಿಯ ಅಧಿಕಾರಿಗಳು ಸಭೆ ನಡೆಸುತ್ತಿದ್ದಾರೆ. ಇದೀಗ ಗಡಿ ಭಾಗದಲ್ಲಿ 45 ವರ್ಷಗಳ ಬಳಿಕ ಈ ಘಟನೆ ನಡೆದಿದೆ.

More articles

Latest article