



ಬೆಂಗಳೂರು: ಕೊರೊನಾ ವೈರಸ್ ರಾಜ್ಯದೆಲ್ಲೆಡೆ ಹೆಚ್ಚುತ್ತಿರುವ ಬೆನ್ನಲ್ಲೇ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮೊದಲ ಪೊಲೀಸ್ ಅಧಿಕಾರಿಯೋರ್ವರ ಬಲಿಯಾಗಿದೆ. ಮತ್ತೊಬ್ಬರು ಎಎಸ್ಐಗೆ ಕೊರೊನಾ ಪಾಸಿಟಿವ್ ಬಂದಿರುವ ಬಗ್ಗೆ ಮಾಹಿತಿ ಇದೆ.
ಮೃತರು ಬೆಂಗಳೂರು ವಿ.ವಿ.ಪುರಂ ಸಂಚಾರಿ ಠಾಣೆ ಎ.ಎಸ್. ಐ. ಎಂದು ಮಾಹಿತಿ ಬಂದಿದೆ.
ಡಯಾಬಿಟೀಸ್ನಿಂದ ಬಳಲುತ್ತಿದ್ದ ಇವರು 15 ದಿನಗಳಲ್ಲಿ ನಿವೃತ್ತರಾಗಲಿದ್ದು, ಜೂ.13 ರಂದು ಥಣಿಸಂದ್ರದ ಮನೆಯಲ್ಲಿ ದಿಢೀರನೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅವರ ಮರಣೋತ್ತರ ತಪಾಸಣೆ ನಡೆಸಿದಾಗ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಬಳಿಕ ಅದೇ ಠಾಣೆಯ ಮತ್ತೊಬ್ಬ ಎಎಸ್ಐಗೂ ಸೋಂಕು ತಗುಲಿರುವ ಬಗ್ಗೆ ವರದಿ ಬಂದಿದ್ದು, ವಿಷಯ ತಿಳಿದ ತಕ್ಷಣ ಪೊಲೀಸ್ ಹಿರಿಯ ಅಧಿಕಾರಿಗಳು ಸಭೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಠಾಣೆಯನ್ನು ಸೀಲ್ ಡೌನ್ ಮಾಡಿ, ಸ್ಯಾನಿಟೈಸರ್ ಮಾಡಲಾಗುತ್ತಿದ್ದು, ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.





