






ಬಂಟ್ವಾಳ: ರಾಜ್ಯದಲ್ಲಿ ಇಂದು 317 ಹೊಸ ಕೇಸ್ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 7530 ಕ್ಕೆ ಏರಿಕೆಯಾಗಿದೆ.
ದ.ಕ. 79, ಕಲಬುರಗಿ 63, ಬಳ್ಳಾರಿ 53, ಬೆಂಗಳೂರು ನಗರ 47, ಧಾರವಾಡ 8, ಉಡುಪಿ, ಶಿವಮೊಗ್ಗ ತಲಾ 7, ಯಾದಗಿರಿ, ರಾಯಚೂರು, ಉ.ಕ. ತಲಾ 6, ಹಾಸನ 5, ವಿಜಯಪುರ, ಮೈಸೂರು, ಗದಗ, ರಾಮನಗರ, ಚಿಕ್ಕಮಗಳೂರು, ಕೊಪ್ಪಳ ತಲಾ 4, ಬೆಳಗಾವಿ 3, ಬೀದರ್ 2, ತುಮಕೂರು 1 ಕೇಸ್ ಪತ್ತೆಯಾಗಿರುವ ಬಗ್ಗೆ ಇಂದಿನ ಬುಲೆಟಿನ್ ನಲ್ಲಿ ಪತ್ತೆಯಾಗಿದೆ.
ಇಂದು ಒಂದೇ ದಿನ ರಾಜ್ಯದಲ್ಲಿ 7 ಮಂದಿ ಸೋಂಕಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 94 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಇಂದು 322 ಮಂದಿ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು 4456 ಮಂದಿ ಗುಣಮುಖರಾದ ಬಗ್ಗೆ ಮಾಹಿತಿ ಇದೆ.





