ಬಂಟ್ವಾಳ: ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಭೇಟಿ ಮಾಡಿ ನೂತನ ತುಂಬೆ ಡ್ಯಾಮಿನಿಂದ ಮುಳುಗಡೆಯಾದ ಜಮೀನಿಗೆ ಇನ್ನು ಕೆಲವು ರೈತರಿಗೆ ನೆಲ ಬಾಡಿಗೆ ಅಥವಾ ಶಾಶ್ವತ ಭೂ ಪರಿಹಾರ ದೊರೆಯದೇ ಇರುವ ಬಗ್ಗೆ ಮನವಿ ಅರ್ಪಿಸಲಾಯಿತು.

ಕಳೆದ ವಿಧಾನಸಭೆ ಅಧಿವೇಶನದಲ್ಲಿ ಬಂಟ್ವಾಳ ಶಾಸಕರು ಸಂತ್ರಸ್ತ ರೈತರಿಗೆ ವರತೆ ಪ್ರದೇಶಕ್ಕೂ ಭೂ ಪರಿಹಾರ ವರಿಸಬೇಕು ಎಂಬುದಾಗಿ ಸರಕಾರದ ಗಮನ ಸೆಳೆದಾಗ ಕಂದಾಯ ಸಚಿವರು ವರ್ಗದ ದೇಶಕ್ಕೂ ಭೂ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು ಆದರೆ ಈತನಕ ಅದರ ಅನುಷ್ಠಾನ ಆಗಿರದೇ ಇರುವುದರ ಬಗ್ಗೆ ಗಮನ ಸೆಳೆಯಲಾಯಿತು.

ತುಂಬೆ ಡ್ಯಾಮ್ ರೈತರ ಹೋರಾಟ ಸಮಿತಿ ಅಧ್ಯಕ್ಷ ಎo. ಸುಬ್ರಹ್ಮಣ್ಯ ಭಟ್ ಪಾಣೆಮಂಗಳೂರು, ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯ ಶಂಕರ ಬಾಸ್ರಿ ತಾಯ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರ ರಾಧಾಕೃಷ್ಣ ಆಳ್ವ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ ಶೋಭಿತ ಪೂಂಜಾ ಜಯ ಕರ್ನಾಟಕ ಜಿಲ್ಲಾ ಅಧ್ಯಕ್ಷರು ಶ್ರೀಕಾಂತ್ ಶೆಟ್ಟಿ ಮೂಡಬಿದರೆ ಶಾಸಕ ಉಮಾನಾಥ ಕೋಟ್ಯಾನ್ ಉಪಸ್ಥಿತರಿದ್ದರು ಶಾಸಕರ ಗಮನಕ್ಕೆ ತಂದು ರೈತರ ಸಮಸ್ಯೆ ಪರಿಹರಿಸುವುದಾಗಿ ಉಸ್ತುವಾರಿ ಸಚಿವರು ಭರವಸೆ ನೀಡಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here