


ಬಂಟ್ವಾಳ: ಜನ್ಮ ಕೊಟ್ಟ ಅಪ್ಪನನ್ನೆ ಕೊಂದ ಹೃದಯವಿದ್ರಾಹಕ ಘಟನೆ ದ.ಕ.ಜಿಲ್ಲೆಯ ಉಪ್ಪಿನಂಗಡಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪೊಲೀಸ್ ಠಾಣಾ ವ್ಯಾಪ್ತಿಯ ಕರಾಯ ಗ್ರಾಮದ ಮುಗ್ಗಗುತ್ತು ಎಂಬಲ್ಲಿನ ನಿವಾಸಿ ಧರ್ಣಪ್ಪ ಪೂಜಾರಿ (69) ಮಕ್ಕಳಿಂದ ಹತರಾದ ದುರ್ದೈವಿ ತಂದೆ.
ಜೂ.14 ರಂದು ಸುಮಾರು ರಾತ್ರಿ 11.45 ರಿಂದ 12.15 ರ ನಡುವೆ ಧರ್ಣಪ್ಪ ಎಂಬವರನ್ನು ಅವರ ಮಕ್ಕಳಾದ ಮೋನಪ್ಪ ಪೂಜಾರಿ (ಪ್ರಾಯ 34 ವರ್ಷ) ಹಾಗೂ ನವೀನ (28 ವರ್ಷ) ಎಂಬವರುಗಳು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕತ್ತಿ ಹಾಗೂ ಅಡಿಕೆ ಮರದ ಸಲಾಕೆಯಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಉಪ್ಪಿನಂಗಡಿ ಪೋಲೀಸರು ತಿಳಿಸಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣಾ ಎಸ್. ಐ.ಈರಯ್ಯ ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಮುಂದುವರೆಸಲಾಗಿದೆ.






