ಬಂಟ್ವಾಳ: ಲೊರೆಟ್ಟೋ ಮಾತಾ ಚರ್ಚಿನಲ್ಲಿ ಸರ್ಕಾರದ ಹಾಗೂ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರ ಆದೇಶದಂತೆ ಜಾರಿಗೊಳಿಸಲಾದ ನಿಯಮಗಳೊಂದಿಗೆ ಜೂ. 13ರಂದು ಶನಿವಾರ ಸಂಜೆ 4.30 ಬಲಿಪೂಜೆಗಳು ಆರಂಭಗೊಂಡವು. ಅದರಂತೆ ಭಾನುವಾರ ಬೆಳಿಗ್ಗೆ 7.30 ಹಾಗೂ 10 ಗಂಟೆಗೆ ಬಲಿಪೂಜೆಗಳು ನಡೆದವು. ನೂರಾರು ಭಕ್ತಾದಿಗಳು ಭಕ್ತಿ, ಶ್ರದ್ಧೆಯಿಂದ ಧರ್ಮಗುರುಗಳೊಂದಿಗೆ ಬಲಿ ಪೂಜೆಯನ್ನು ಅರ್ಪಿಸಿದರು.

10 ವರ್ಷದ ಕೆಳಗಿನ ಹಾಗೂ 65 ವರ್ಷದ ಮೇಲ್ಪಟ್ಟವರಿಗೆ ಅವರ ಆರೋಗ್ಯದ ದೃಷ್ಟಿಯಿಂದ ಬಲಿ ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶವಿರಲಿಲ್ಲ. ಚರ್ಚ್ ಧರ್ಮಗುರುಗಳು, ಪಾಲನ ಮಂಡಳಿಯ ಉಪಾಧ್ಯಕ್ಷರು, ಕಾರ್ಯದರ್ಶಿ ಹಾಗೂ ವಾಲೆಗಳು ಗೂರ್ಕರ್ ರವರೊಂದಿಗೆ ಚರ್ಚಿಸಿ, ಸ್ವಯಂಸೇವಕರನ್ನು ನಿಯೋಜಿಸಿದ್ದರು.

 

ಬಲಿಪೂಜೆಗಳು ಆರಂಭವಾಗುವುದಕ್ಕಿಂತ 20 ನಿಮಿಷ ಮುಂಚಿತವಾಗಿ ಆಗಮಿಸಿ ಶಿಸ್ತುಬದ್ಧವಾಗಿ ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿ ಟೈಜ್ ಮಾಡಿ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here