ಬಂಟ್ವಾಳ: ಲಾಕ್ ಡೌನ್ ನಿಂದ ಸಂಪೂರ್ಣ ವಾಗಿ ಹೊರಬರದೆ ಒದ್ದಾಡುತ್ತಿರುವ ಆರ್ಥಿಕ ಸಂಕಷ್ಟದ ದಿನಗಳಲ್ಲಿ ಬಿಸಿರೋಡಿನಿಂದ ಮಡಂತ್ಯಾರು ವರೆಗೆ ಸರ್ವೀಸ್ ಮಾಡುವ ಕ್ಯಾಬ್ ರಿಕ್ಷಾ ಗಳ ಚಾಲಕರು ಬಡಪಾಯಿ ಪ್ರಯಾಣಿಕರ ಕೈಯಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಾರೆ ಎಂಬ ಆರೋಪಗಳು ಪ್ರಯಾಣಿಕರಿಂದ ಕೇಳಿಬರುತ್ತಿದೆ.
ಈ ಬಗ್ಗೆ ಪ್ರಯಾಣಿಕರು ಪ್ರಶ್ನಿಸಿದರೆ ನಿಮಗೆ ಅಗತ್ಯ ವಿದ್ದರೆ ಬನ್ನಿ ಇಲ್ಲಾಂದ್ರೆ ಬರಬೇಡಿ ಎಂಬ ದರ್ಪದ ಮಾತುಗಳ ಮೂಲಕ ಪ್ರಯಾಣಿಕರನ್ನು ಬಾಯಿಮುಚ್ಚಿಸುವ ಕೆಲಸಗಳು ಆಗುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ.
ಬಿಸಿರೋಡಿನಿಂದ ಮಡಂತ್ಯಾರು ವರೆಗೆ ಲಾಕ್ ಡೌನ್ ಮೊದಲು 25 ರೂ ಪ್ರಯಾಣಿಕರ ಕೈಯಿಂದ ಕ್ಯಾಬ್ ಚಾಲಕರು ಪಡೆದುಕೊಂಡರೆ ಲಾಕ್ ಡೌನ್ ಬಳಿಕ 40 ರಿಂದ 50 ರೂ ಅಂದರೆ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ.
ಸಾಮಾಜಿಕ ಅಂತರ ನೆಪದಲ್ಲಿ ಇವರು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಮಾತುಗಳು ಇದ್ದರೂ ಕೂಡ ಇವರು ಕ್ಯಾಬ್ ರಿಕ್ಷಾದಲ್ಲಿ ಅದರ ಸಾಮಾರ್ಥ್ಯ ಕ್ಕಿಂತಲೂ ಹೆಚ್ಚು ಪ್ರಯಾಣಿಕರ ನ್ನು ಹಾಕಿಕೊಂಡು ಒಬ್ಬರ ಮೇಲೆ ಒಬ್ಬರನ್ನು ಕೂರಿಸಿಕೊಂಡು ಹೋಗುತ್ತಿದ್ದಾರೆ ಎಂದು ಆರೋಪಗಳು ವ್ಯಕ್ತ ವಾಗಿವೆ.
*ಬಸ್ ಇಲ್ಲ*
ಮಂಗಳೂರು ಧರ್ಮಸ್ಥಳ ರೂಟ್ ಗೆ ಖಾಸಗಿ ಬಸ್ ಇಲ್ಲ. ಆದರೆ ಪೀಕ್ ಅವರ್ ಗಳಲ್ಲಿ ಸರಕಾರಿ ಕೆ.ಎಸ್.ಆರ್.ಟಿ.ಸಿ.ಬಸ್ ನ ಸಂಖ್ಯೆ ಕಡಿಮೆ ಇರುವುದೇ ಜನರಿಗೆ ಸಮಸ್ಯೆ ಉಂಟಾಗಿದೆ.
ಸಂಜೆ ಮತ್ತು ಬೆಳಿಗ್ಗೆ ಸರಕಾರಿ ಬಸ್ ನ ವ್ಯವಸ್ಥೆ ಆದರೆ ಜನರು ಕ್ಯಾ ಬ್ ರಿಕ್ಷಾಗಳಂತಹ ಖಾಸಗಿ ವಾಹನಗಳ ಚಾಲಕರ ದುಪ್ಪಟ್ಟು ವಸೂಲಿಯಿಂದ ಪಾರಾಗಲಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

*ನ್ಯಾಯಯುತವಾಗಿ ದರ ಪಡೆದುಕೊಳ್ಳಿ* ಪ್ರಯಾಣಿಕ ಹರೀಶ್ ರಾವ್ ಪುಂಜಾಲಕಟ್ಟೆ

ಸರಕಾರದ ನಿಯಮದಂತೆ ದರ ಹೆಚ್ಚು ಮಾಡಿದರೆ ಪ್ರಯಾಣಿಕರು ಅದಕ್ಕೆ ಹೊಂದಿಕೊಳ್ಳುತ್ತಾರೆ.ಆದರೆ ಕ್ಯಾಬ್ ರಿಕ್ಷಾ ಚಾಲಕರೇ ದರ ಪಟ್ಟಿ ಪ್ರಿಂಟ್ ಮಾಡಿ ದುಪ್ಪಟ್ಟು ಹಣ ವಸೂಲಿ ಮಾಡುವ ಕ್ರಮ ಸರಿಯಲ್ಲ. ಜಿಲ್ಲಾಡಳಿತ ಕ್ಯಾಬ್ ರಿಕ್ಷಾ ಚಾಲಕರ ದರ ಹೆಚ್ಚಿಸಿದ ಬಗ್ಗೆ ವರದಿಯಾಗಿಲ್ಲ, ಅಗಿದ್ದೂ ದರ ಹೆಚ್ಚಿಸಿರುವುದು ಪ್ರಯಾಣಿಕರ ಮೇಲೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಪ್ರಯಾಣಿಕ ಹರೀಶ್ ರಾವ್ ಅವರು ಹೇಳಿದ್ದಾರೆ.
ಸರಕಾರ ಈ ಬಗ್ಗೆ ಸರಿಯಾದ ಕ್ರಮತೆಗೆದುಕೊಂಡು ಜನರಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕಾಗಿದೆ.
ಪ್ರಸ್ತುತ ಪರಿಸ್ಥಿತಿ ಯಲ್ಲಿ ಯಾರು ಕೂಡಾ ಪೇಟೆ ಗೆ ತಿರುಗುವ ಉದ್ದೇಶದಿಂದ ಬರುತ್ತಿಲ್ಲ, ಕಷ್ಟಪಟ್ಟು ದುಡಿಯುವ ಉದ್ದೇಶದಿಂದ ಬರುತ್ತಾರೆ, ಕೆಲಸವೇ ಇಲ್ಲದ ಈ ಪರಿಸ್ಥಿತಿಯಲ್ಲಿ ಇವರ ವರ್ತನೆ ಸರಿಯಲ್ಲ ಎಂದು ಅವರು ಆರೋಪ ವ್ಯಕ್ತಪಡಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here