ಬಂಟ್ವಾಳ: ಕರಿಯಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಪಾಟಿಸಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಕರಿಯಂಗಳ ಗ್ರಾಮಕ್ಕೆ ಒಟ್ಟು 3.50 ಕೋಟಿಯಷ್ಟು ಅನುದಾನವನ್ನು ನೀಡಿದ್ದು, ಇದರಲ್ಲಿ 2 ಕೋಟಿಯ ಕೆಲಸ ನಡೆದಿದ್ದು, ಈಗಾಗಲೇ ಉದ್ಫಾಟನೆಗೊಂಡಿದೆ. 1.50 ಕೋಟಿಯ ಕಾಮಗಾರಿಯನ್ನು ಇಂದು ಉದ್ಫಾಟನೆ ಹಾಗೂ ಅಖಿಲೇಶ್ವರ ದೇವಸ್ಥಾನದ ರಸ್ತೆಗೆ ಗುದ್ದಲಿ ಪೂಜೆ ಮಾಡಲಾಯಿತು.

ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನವನ್ನು ಈ ಗ್ರಾಮಕ್ಕೆ ತಂದು ಗ್ರಾಮದ ಅಭಿವೃದ್ಧಿಗೆ ಶಾಸಕರು ರಾಜೇಶ್ ನಾಯ್ಕ್ ಹೇಳಿದರು. ನಂತರ ಅಖಿಲೇಶ್ವರದ ದೇವಸ್ಥಾನದ ರಸ್ತೆ ಕಾಂಕ್ರಿಟಿಕರಣಕ್ಕೆ ಗುದ್ದಲಿ ಪೂಜೆಯನ್ನು ನೆರೆವೇರಿಸಿದ ಪೊಳಲಿ ರಾಜರಾಜೆಶ್ವರಿ ದೇವಸ್ಥಾನದ ಅರ್ಚಕರು ಹಾಗೂ ಅಖಿಲೇಶ್ವರದ ದೇವಸ್ಥಾನದ ಆಡಳಿತ ಸಮಿತಿಯ ಕಾರ್ಯದರ್ಶಿಯಾದ ರಾಮ್ ಭಟ್‌ವರು ಮಾತನಾಡಿ ಬಹಳ ಹಿಂದಿನಿಂದಲೂ ಅಖಿಲೇಶ್ವರದ ದೇವಸ್ಥಾನದ ಈ ರಸ್ತೆ ಕಾಂಕ್ರೀಟಿಕರಣಗೊಳ್ಳಬೆಂಕು ಎಂದು ಹಲವಾರು ಭಕ್ತರ ಬಯಕೆ ಇತ್ತು. ಭಕ್ತಾಭಿಮಾನಿಗಳು ದೇವಸ್ಥಾನದಕ್ಕೆ ಭೇಟಿ ನೀಡುತ್ತಿದ್ದು, ಜನರ ಅನುಕೂಲಕ್ಕಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್‌ಯವರು ಈ ರಸ್ತೆಗೆ ಅನುದಾನವನ್ನು ಮಂಜೂರು ಮಾಡಿದ್ದು ನಮ್ಮಗೆಲ್ಲರಿಗೂ ಸಂತೋಷವಾಗಿದೆ. ಶಾಸಕರು ಕ್ಷೇತ್ರದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು ಇನ್ನಷ್ಟು ಅಭಿವೃದ್ಧಿ ಕಾರ್ಯ ಮಾಡುವ ಶಕ್ತಿ ತಾಯಿ ರಾಜರಾಜೆಶ್ವರಿ ಮತ್ತು ಅಖಿಲೇಶ್ವರದ ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದರು.

ಈ ಸಂಧರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರು ಹಾಗೂ ಪೊಳಲಿ ವ್ಯವಸಾಯ ಸೇವಾ ಸಹಕಾರಿಯ ಬ್ಯಾಂಕಿನ ಉಪಾಧ್ಯಕ್ಷ ವೆಂಕಟೇಶ್ ನಾವುಡ, ತಾ.ಪಂ ಸದಸ್ಯ ಯಶವಂತ ಪೂಜಾರಿ ಪೊಳಲಿ, ಪಂ.ಅಧ್ಯಕ್ಷೆ ಚಂದ್ರಾವತಿ, ಗೋಪಾಲ ಬಂಗೇರ, ತಾಲೂಕು ಭೂ ನ್ಯಾಯ ಮಂಡಳಿಯ ಸದಸ್ಯ ಸುಕೇಶ್ ಚೌಟ, ಪಂ. ಸದಸ್ಯ ಲೋಕೇಶ್ ಭರಣಿ, ಕಿಶೋರ್ ಪಲ್ಲಿಪಾಡಿ, ಕುಮಾರ್ ದೇವಾಡಿಗ, ಕಾರ್ತಿಕ್ ಬಳ್ಳಾಲ್ ಅಮ್ಮುಂಜೆ, ಚಂದ್ರಹಾಸ್ ಟೈಲರ್, ರೋಶನ್ ಗರೋಡಿ, ನವೀನ್ ಪೊಳಲಿ ಉಪಸ್ಥಿತರಿದ್ದರು.
ಇಂದು ಉದ್ಫಾಟನೆಗೊಂಡ ಕಾಮಗಾರಿಗಳ ವಿವರ :
ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ದ್ವಾರದ ಬಳಿ ಹೈಮಾಸ್ಟ್ ಅಳವಡಿಕೆ – 1.25 ಲಕ್ಷ
ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪುಂಚಮೆ-ಪಲ್ಲಿಪಾಡಿ ರಸ್ತೆ ಮರುಡಾಮರೀಕರಣ – 87 ಲಕ್ಷ
ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಅಖೀಲೇಶ್ವರ ದೇವಸ್ಥಾನ ರಸ್ತೆ ಅಭಿವೃದ್ಧಿ – 10 ಲಕ್ಷ
ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಕಲ್ಕುಟ ರಸ್ತೆ ಅಭಿವೃದ್ಧಿ – 20 ಲಕ್ಷ
ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಮಯ್ಯರ ಕೂಟೇಲು ಎಂಬಲ್ಲಿ ಫಲ್ಗುಣಿ ನದಿ ದಂಡೆ ಸಂರಕ್ಷಣಾ ಕಾಮಗಾರಿ – 40 ಲಕ್ಷ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here