



ಬಂಟ್ವಾಳ: ಹಿಂದೂ ರುದ್ರಭೂಮಿಯ ಶಿವನ ವಿಗ್ರಹದ ಪೀಠದ ಮೇಲೆ ಶೂ ಧರಿಸಿ ಓಡಾಟ ನಡೆಸಿದ ಜೊತೆ ಅಸಭ್ಯರೀತಿಯಲ್ಲಿ ಟಿಕ್ ಟಾಕ್ ಮಾಡಿ ಹಿಂದೂ ಧಾರ್ಮಿಕ ಭಾವನೆ ಗಳಿಗೆ ಧಕ್ಕೆಯುಂಟು ಮಾಡಿದ್ದಾರೆ ಎಂಬ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಎಸ್.ಐ.ಪ್ರಸನ್ನ ನೇತ್ರತ್ವದ ತಂಡ ಕಾರ್ಯಚರಣೆ ನಡೆಸಿ ನಾಲ್ವರು ಆರೋಪಿಗಳ ಬಂದಿಸಿದ್ದಾರೆ.
ಸ್ಥಳೀಯ ಸಜೀಪ ನಿವಾಸಿಗಳಾದ ಮೊಹಮ್ಮದ್ ಮಸೂದ್, ಮೊಹಮ್ಮದ್ಅಜೀಮ್, ಮೊಹಮ್ಮದ್ ಅಬ್ದುಲ್ ಲತೀಪ್ ಹಾಗೂ ಮೊಹಮ್ಮದ್ ಅರ್ಪಾಜ್ ಬಂಧಿತ ಆರೋಪಿಗಳು.
ಲಾಕ್ ಡೌನ್ ನ ಈ ಅವಧಿಯಲ್ಲಿ ನಾಲ್ವರು ಆರೋಪಿಗಳು ಸಜೀಪದ ಕಂಚಿನಡ್ಕ ಪದವು ರುದ್ರ ಭೂಮಿಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ಅಲ್ಲಿರುವ ಶಿವನ ವಿಗ್ರಹ ಪೀಠದ ಮೇಲೆ ಶೂಧರಿಸಿ ಕುಳಿತು ಕೊಂಡು ಓಡಾಟ ನಡೆಸಿದ್ದಾರೆ ಈ ವಿಡಿಯೋ ಟಿಕ್ ಟಾಕ್ ಮೂಲಕ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದರ ಜೊತೆ ವಿಗ್ರಹ ದ ಸಮೀಪ ಬಿಯರ್ ಬಾಟಲಿ, ಗಾಂಜಾ ಸೇವನೆ ಮಾಡಿದ ಬಗ್ಗೆ ಸಾಕ್ಷ್ಯಗಳು ದೊರೆತಿವೆ, ಅಲ್ಲದೆ ಸೇವಿಸುವ ವಿಡಿಯೋ ಕೂಡ ವೈರಲ್ ಆಗಿದೆ.
ಇದು ಹಿಂದು ಧಾರ್ಮಿಕ ಶೃದ್ದಾ ಕೇಂದ್ರ ಕ್ಕೆ ಧಕ್ಕೆಯಾಗಿದೆ ಎಂದು ರುದ್ರಭೂಮಿ ಅಧ್ಯಕ್ಷ ಠಾಣೆ ಗೆ ದೂರು ನೀಡಿದ್ದರು.
ಬಂಟ್ವಾಳ ತಾಲೂಕಿನ ಉಳ್ಳಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವ ಕಂಚಿನಡ್ಕ ಪದವು ಹಿಂದೂ ರುದ್ರಭೂಮಿಯೊಳಗೆ ಆರೋಪಿಗಳು ಅಕ್ರಮವಾಗಿ ಪ್ರವೇಶ ಮಾಡಿ ಹಿಂದೂಗಳ ಶೃದ್ದಾ ಕೇಂದ್ರ ವನ್ನು ಅಪವಿತ್ರಗೊಳಿಸಿದ್ದಾರೆ ಎಂದು ಆರೋಪಿಸಿ ರುದ್ರ ಭೂಮಿ ಅಧ್ಯಕ್ಷ ಮಾಜಿ ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ ಅವರು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಲ್ಲಿ ಶನಿವಾರ ಬೆಳಿಗ್ಗೆ ದೂರು ನೀಡಿದ್ದಾರೆ.
ಈ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಡಿ.ವೈ.ಎಸ್.ಪಿ.ವೆಲಂಟೈನ್ ಡಿ.ಸೋಜ ಅವರ ನಿರ್ದೇಶನ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ ಅವರ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್.ಐ .ಪ್ರಸನ್ನ ಅವರ ತಂಡ ಆರೋಪಿಗಳ ಬಂಧನದ ಕಾರ್ಯಚರಣೆಗೆ ಇಳಿಯುತ್ತಾರೆ.
ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಪ್ರಸನ್ನ ಅವರ ತಂಡ ನಾಲ್ವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.





