



ಬಂಟ್ವಾಳ: ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆಗೆ ಬಂಟ್ವಾಳ ತಾಲೂಕಿನ ವಿವಿಧ ಕಡೆಗಳಲ್ಲಿ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ತಾಲೂಕಿನ ಗ್ರಾಮೀಣ ಭಾಗದ ಅನೇಕ ಮನೆಗಳು ಸಂಪೂರ್ಣ ಜರಿದು ಬಿದ್ದರೆ ಕೆಲವೊಂದು ಮನೆಗಳು ಭಾಗಶಃ ಹಾನಿಯಾಗಿದೆ.
ಕಾವಳಪಡೂರು ಗ್ರಾಮದ ಕಮಲ, ಪಂಜಿಕಲ್ಲು ಗ್ರಾಮದ ಭೋಜ ಪೂಜಾರಿ ಅವರ ಮನೆಗೂ ಹಾನಿಯಾಗಿದೆ.
ಕಾರಿಂಜ ಕ್ರಾಸ್ ನಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಿದ್ದು ಹಾನಿಯಾಗಿದೆ.





