ಮಂಗಳೂರು: ಮಂಗಳೂರು ಮತ್ತು ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಕಡೆ ಏಕಕಾಲಕ್ಕೆ ಎ.ಸಿ.ಬಿ. ದಾಳಿ ನಡೆಸಿದೆ. ಮಂಗಳೂರಿನ ಅಪಾರ್ಟ್ಮೆಂಟ್ ನಲ್ಲಿ ಶೋಧ ಕಾರ್ಯ.
ಕೆ‌.ಐ.ಎ.ಡಿ.ಬಿ ವಿಶೇಷ ಭೂಸ್ವಾಧೀನಾಧಿಕಾರಿ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಡಿ.19 ರಂದು 5 ಲಕ್ಷ ಲಂಚ ಸ್ವೀಕರಿಸಿ ಎಸಿಬಿ ಬಲೆಗೆ ಬಿದ್ದಿದ್ದ ದಾಸೇಗೌಡ. ದಾಸೇಗೌಡ, ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ.ಆ ನಂತರ ಮದ್ಯದಲ್ಲಿ ಗೋಲಿಬಾರ್ ಮತ್ತು ಕೊರೊನ ಇದ್ದುದ್ದರಿಂದ ಕಾರ್ಯಾಚರಣೆ ಮುಂದೂಡಿದ್ದ ಎಸಿಬಿ.


ದಾಳಿ ವೇಳೆ ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆ
ಮಂಗಳೂರಿನಲ್ಲಿ ಒಂದು ಫ್ಲಾಟ್ ಸೇರಿ ಮೂರ್ನಾಲ್ಕು ಮನೆ ಪತ್ತೆ‌ಯಾದ ಬಗ್ಗೆ ವರದಿಯಾಗಿದೆ. ಬೆಂಗಳೂರು ಸೇರಿದಂತೆ ವಿವಿಧ ಕಡೆ 11 ಸೈಟ್, ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ.
ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ರಾಜ್ಯದ ಹಲವೆಡೆ ದಾಳಿ ನಡೆಸಲಾಗಿದ್ದು,
ಮಂಗಳೂರು ಎಸಿಬಿ ಎಸ್ಪಿ ಉಮಾಪ್ರಶಾಂತ್, ಡಿವೈಎಸ್ಪಿ ಮಂಜುನಾಥ್, ಇನ್ಸ್ ಪೆಕ್ಟರ್ ಯೋಗೀಶ್ ನಾಯ್ಕ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಸದ್ಯ ಲಂಚ ಸ್ವೀಕಾರ ಆರೋಪದಡಿ ದಾಸೇಗೌಡ ಅಮಾನತ್ತಿನಲ್ಲಿರುವರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here