ಉಜಿರೆ: ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಿಡಗಳನ್ನು ದತ್ತು ಸ್ವೀಕಾರ ಮಾಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು.

ಪರಿಸರದೊಂದಿಗೆ ಬದುಕಿದರೆ ಮಾತ್ರ ಪರಿಸರದ ಅರಿವಾಗೋದು. ಅದರಲ್ಲಿ ಆಗುವ ಬದಲಾವಣೆಗಳನ್ನು ಗುರುತಿಸಬಹುದು. ಆಧುನಿಕ ಗಡಿಬಿಡಿಯ ಜಗತ್ತು ಅದನ್ನು ಮರೆತು ಹೋಗಿದೆ. ಅದರೊಂದಿಗೆ ಬದುಕಲು ಕಲಿತರೆ ನಾವೂ ಅದರಿಂದ ಹೊರಬರಲು ಇಷ್ಟ ಪಡಲಾರೆವು ಎಂದು ಪರಿಸರ ದಿನಾಚರಣೆ ಪ್ರಯುಕ್ತ ಶ್ರೀ ಧರ್ಮಸ್ಥಳ ಆಂಗ್ಲಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಗಿಡವನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮ ನಡೆದಿದೆ.

ಅಲ್ಲಿನ ಮುಖ್ಯ ಶಿಕ್ಷಕಿ ಪರಿಮಳ ಎಮ್.ವಿ. ಪ್ರತೀ ವರ್ಷ ಮಕ್ಕಳ ಜೊತೆ ಪರಿಸರಕ್ಕಾಗಿ ಅದರ ಉಳಿವಿಗಾಗಿ ಒಂದಲ್ಲ ಒಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೆವು. ಆದರೆ ಇಂದು ಮಹಾಮಾರಿ ಕೊರೊನ ಎಲ್ಲರನ್ನು ಬಂಧಿಯಾಗಿಸಿದೆ. ಹೀಗಾಗಿ ಶಿಕ್ಷಕರಾದ ನಾವೆಲ್ಲರೂ ಈ ಸಲ ಒಂದೊಂದು ಗಿಡವನ್ನು ದತ್ತು ತೆಗೆದುಕೊಂಡು ವರ್ಷ ಪೂರ್ತಿ ಅದರ ಜವಾಬ್ದಾರಿ ತೆಗೆದುಕೊಂಡು ಅದರ ಆರೈಕೆ ನಮ್ಮದಾಗಿಸಿ ಆ ಮೂಲಕ ಪರಿಸರಕ್ಕೆ ಕಿಂಚಿತ್ತು ಸೇವೆ ಸಲ್ಲಿಸೋಣ ಎಂದು ಹೇಳಿದರು.

ನಂತರ ಪ್ರತೀಯೊಬ್ಬ ಶಿಕ್ಷಕರು ಒಂದೊಂದು ಗಿಡವನ್ನು ದತ್ತು ತೆಗೆದುಕೊಂಡು ಅದನ್ನು ಉಳಿಸಿ ಬೆಳೆಸುವ ವಾಗ್ದಾನ ಮಾಡಿದರು. ಆಗಮಿಸಿದ ಪ್ರತೀಯೊಬ್ಬರು ಸ್ಯಾನಿಟೈಸರ್ ಬಳಸಿ ವೈಯಕ್ತಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮ ಸೂಸೂತ್ರವಾಗಿ ನಡೆಸಿಕೊಟ್ಟರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here