ಬಂಟ್ವಾಳ: ಬೆಂಜನಪದವು ಸ.ಪ.ಪೂ. ಕಾಲೇಜಿನ ಪ್ರೌಢ ಶಾಲಾ ವಿಭಾಗದ ಶಾಲಾ ಪುನರಾರಂಭದ ಬಗ್ಗೆ ಪೋಷಕರ ಅಭಿಪ್ರಾಯಕ್ಕಾಗಿ ಎಸ್.ಡಿ.ಎಂ.ಸಿ ಸಹಯೋಗದೊಂದಿಗೆ (ಇಂದು) ಜೂ.10 ರಂದು ಪೋಷಕರ ಸಭೆ ನಡೆಸಲಾಯಿತು.


ಆಂಗ್ಲ ಭಾಷಾ ಶಿಕ್ಷಕಿ ಮರ್ಲಿನ್ ಮೇಬಲ್ ಪ್ರಾರ್ಥಿಸಿದರು. ಶಾಲಾ ಉಪಪ್ರಾಂಶುಪಾಲೆ ಶ್ರೀದೇವಿ ಸ್ವಾಗತಿಸಿ, ಕೊರೋನ ವೈರಸ್ ನಿಂದ ಆದ ದುಷ್ಪರಿಣಾಮಗಳು ಮತ್ತು ಮುಂಜಾಗೃತಾ ಕ್ರಮಗಳ ಬಗ್ಗೆ ತಿಳಿಸಿ, ಪ್ರಸ್ತುತ ಶಾಲಾ ಪುನರಾಂಭದ ಬಗ್ಗೆ ಸರಕಾರದ ಆದೇಶದಂತೆ ಶಾಲಾಭಿವೃದ್ಧಿ ಸಮಿತಿ ಮತ್ತು ಪೋಷಕರ ಅಭಿಪ್ರಾಯಗಳು ಯಾವ ರೀತಿ ಸರಕಾರದ ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿ ಮುಕ್ತ ಅಭಿಪ್ರಾಯ ಸಂಗ್ರಹಕ್ಕೆ ಚಾಲನೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ವಾಮನ ಆಚಾರ್ಯ ಅವರು ಕೊರೋನ ನಿರ್ಮೂಲನೆಗೆ ಪೋಷಕರ ಪಾತ್ರ ಮತ್ತು ಶಾಲಾ ಪುನರಾರಂಭದಲ್ಲಿ ಪೋಷಕರ ಅಭಿಪ್ರಾಯದ ಮಹತ್ವದ ಬಗ್ಗೆ ತಿಳಿಸಿದರು.
ಪೋಷಕರ ಸಭೆಯ ಚರ್ಚೆ – ಸಂವಾದಗಳನ್ನು ಕನ್ನಡ ಪ್ರಾಧ್ಯಾಪಕ ಅನಂತ ಪಧ್ಮನಾಭ ಮತ್ತು ಕಲಾ ಶಿಕ್ಷಕ ಮಹಮ್ಮದ್ ಇಕ್ಬಾಲ್ ಯು. ಎ. ನಡೆಸಿಕೊಟ್ಟರು.
ಶಾಲಾಭಿವೃದ್ಧಿ ಸಮಿತಿಯ ಸರ್ವ ಸದಸ್ಯರು ಮತ್ತು ಎಲ್ಲಾ ಬೋಧಕ ಮತ್ತು ಭೋದಕೇತರ ಸಿಬ್ಬಂದಿ ಭಾಗವಹಿಸಿದ್ದರು.
ವೃತ್ತಿ ಶಿಕ್ಷಕ ದೇವ್ ದಾಸ್ ಕೆ. ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here