



ಬಂಟ್ವಾಳ: ಮೋಸ ಮೋಸ ….ಅದು ವೃದ್ದೆ ಗೆ ಮಾಡಿದ ಮೋಸ..ಇದೆಂತಾ ಮೋಸರೀ…
ವಿದ್ಯೆ ಇಲ್ಲದ ಒಬ್ಬಂಟಿ ವೃದ್ದೆ ಮಹಿಳೆಗೆ ಮಾಡಿದ ಅನ್ಯಾಯ.
ದೇವರು ಕೊಟ್ಟರೂ ಪೂಜಾರಿ ಬಿಡಲ್ಲ ಎಂಬ ರೀತಿಯಲ್ಲಿ ಗ್ರಾಮೀಣ ಪ್ರದೇಶದ ಅನಕ್ಷರಸ್ಥ ವೃದ್ದೆ ಗೆ ಪಡಿತರ ಅಂಗಡಿ ಯವರು ಮೋಸ ಮಾಡಿ ಬಕಾಸುರನಾದ ಘಟನೆ ಬೆಳಕಿಗೆ ಬಂದಿದೆ.
ಇದು ಬಂಟ್ವಾಳ ತಾಲೂಕಿನ ವಾಮದಪದವಿನ ಚೆನ್ನೈತ್ತೋಡಿಯಲ್ಲಿ ನಡೆದ ಘಟನೆ.
ಚೆನ್ನೈತ್ತೋಡಿ ಗ್ರಾಮದ ಮುರದಮೇಲು ನಿವಾಸಿ ಗುಲಾಬಿ ಎಂಬ 66 ವರ್ಷದ ವೃದ್ದೆಗೆ ಪಡಿತರ ಅಂಗಡಿಯಲ್ಲಿ ಮಾಡಿರುವ ಅನ್ಯಾಯದ ಬಗ್ಗೆ ಇಲ್ಲಿ ತಿಳಿಸುತ್ತೇವೆ .
ಚೆನ್ನೈತ್ತೋಡಿ ಶ್ರೀಧರ್ ಪೈ ಎಂಬವರಿಗೆ ಸೇರಿದ ಪಡಿತರ ಅಂಗಡಿಯಲ್ಲಿ ವೃದ್ದೆಗೆ ಮೋಸ ಮಾಡಿದ್ದಾರೆ ಎಂಬ ದೂರು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಹಾಗೂ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್.ಅವರಿಗೆ ಗುಲಾಬಿ ಸಲ್ಲಿಸಿದ್ದಾರೆ.
*ಪಡಿತರ ಅಕ್ಕಿ ನೀಡುವಿಕೆಯಲ್ಲಿ ಮೋಸ*
ಈಕೆ ಒಬ್ನಂಟಿ ಬಡ ವೃದ್ದೆ .ಹಾಗಾಗಿ ಇವರಿಗೆ ಗ್ರಾ.ಪಂ.ಅಂತ್ಯೋಧಯ ಪಡಿತರ ಕಾರ್ಡ್ ನೀಡಿದೆ.
ಅಂತ್ಯೋಧಯ ಪಡಿತರ ಚೀಟಿಯವರಿಗೆ ಸರಕಾರದ ಪ್ರಕಾರ 35+ 5. ಕೆ.ಜಿ.ಪಡಿತರ ಅಕ್ಕಿಯನ್ನು ಅಂಗಡಿಯವರು ನೀಡಬೇಕು.
ಆದರೆ ಈ ಮಹಿಳೆಗೆ ಅನಕ್ಷರಸ್ಥೆ ಎಂಬ ಕಾರಣಕ್ಕೆ ಇವರಿಗೆ ಲೋಕಜ್ಞಾನವಿಲ್ಲ ಎಂಬ ಲೆಕ್ಕಾಚಾರದಲ್ಲಿ ಕಳೆದ ಕೆಲ ಸಮಯದಿಂದ ಚೆನ್ನೈತ್ತೋಡಿ ಶ್ರೀಧರ್ ಪೈ ಎಂಬವರ ಪಡಿತರ ಅಂಗಡಿ ಯವರು ಕೇವಲ 7 ಕೆ.ಜಿ.ಅಕ್ಕಿ ನೀಡುತ್ತಿದ್ದರು.ಕಳೆದ ಎರಡು ತಿಂಗಳಿನಿಂದ ಈಕೆಗೆ 10 ಕೆ.ಜಿಗಳಂತೆ ಅಕ್ಕಿಯನ್ನು ನೀಡಿದ ಬಗ್ಗೆ ಪಡಿತರ ಚೀಟಿಯಲ್ಲಿ ಉಲ್ಲೇಖ ಮಾಡಲಾಗಿ ದೆ.
ಸರಕಾರ ನೀಡಿದ ಪಡಿತರ ಚೀಟಿಯಲ್ಲಿ ನ ಅಕ್ಕಿಯನ್ನು ಪಡೆಯಲು ಇವರ ಹೆಬ್ಬೆರಳಿನ ಮುದ್ರೆ ಯನ್ನು ಪಡೆದುಕೊಂಡು ಪಡಿತರ ಅಂಗಡಿಯವರು 35 ಕೆ.ಜಿ.ಅಕ್ಕಿಯನ್ನು ಪಡೆದುಕೊಳ್ಳುತ್ತಾರೆ ಆದರೆ ಈ ಅಜ್ಜಿಗೆ ಕೇವಲ 7 ಕೆ.ಜಿ.ಮತ್ತು ಇತ್ತೀಚಿನ ಎರಡು ತಿಂಗಳಿನಲ್ಲಿ 10 ಕೆ.ಜಿ.ಅಕ್ಕಿಯನ್ನು ನೀಡಿ ಮೋಸ ಮಾಡಿದ್ದಾರೆ.
ಉಳಿದಿರುವ ಅಕ್ಕಿಯನ್ನು ಅಂಗಡಿಯವರು ದುಪ್ಪಟ್ಟು ಹಣಕ್ಕೆ ಮಾರಿರಬಹುದು ಎಂಬ ಸಂಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
*ಒತ್ತಾಯ*
ಚೆನ್ನೈತ್ತೋಡಿಯಲ್ಲಿನ ಈ ಪಡಿತರ ಅಂಗಡಿಯಲ್ಲಿ ಇಂತಹ ಇನ್ನೂ ಅನೇಕ ಪ್ರಕರಣಗಳು ಇರುವ ಬಗ್ಗೆ ಸಂಶಯವಿದೆ ಅಲ್ಲದೆ ಸ್ಥಳೀಯರ ದೂರು ಕೂಡಾ ಇವೆ ಹಾಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮಕ್ಕಾಗಿ ತುಳುನಾಡ ರಕ್ಷಣಾ ಘಟಕದ ದೇವಿಪ್ರಸಾದ್ ಶೆಟ್ಟಿ ಹಾಗೂ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ ಶಾಸಕರ ಲ್ಲಿ ಒತ್ತಾಯಿಸಿದ್ದಾರೆ.
*ಅಕ್ಕಿ ನೀಡುತ್ತೇವೆ ದೂರು ವಾಪಸು ಪಡೆಯಿರಿ*
ಶಾಸಕರಿಗೆ ಹಾಗೂ ತಹಶೀಲ್ದಾರ್ ಅವರಿಗೆ ವೃದ್ದೆ ದೂರು ನೀಡಿದ ಕೂಡಲೇ ಸುದ್ದಿ ತಿಳಿದ ಪಡಿತರ ಅಂಗಡಿಯವರು ವೃದ್ದೆ ಯ ಮನೆಗೆ ತೆರಳಿ ನಾವು ನಿಮಗೆ ಎಲ್ಲಾ ಪಡಿತರ ಅಕ್ಕಿಯನ್ನು ನೀಡುತ್ತೇವೆ ಆದರೆ ದೂರು ವಾಪಸು ಪಡೆಯಿರಿ ಎಂದು ಒತ್ತಾಯಿಸಿ ದ ಘಟನೆ ಕೂಡ ನಡೆದಿದೆ ಎಂದು ಸ್ಥಳೀಯ ರು ತಿಳಿಸಿದ್ದಾರೆ.
ಒಂಟಿ ಮಹಿಳೆಯಾದ್ದರಿಂದ ಇವರನ್ನು ಬೆದರಿಸಿ ದೂರು ವಾಪಸು ಪಡೆಯಲು ಸಾಧ್ಯತೆಗಳು ಇವೆ ಈ ಬಗ್ಗೆ ಯೂ ಅಧಿಕಾರಿಗಳು ಗಮನಹರಿಸಬೇಕಾಗಿದೆ ಎಂದು ಸ್ಥಳೀಯರ ಶಾಸಕರ ಗಮನಕ್ಕೆ ತಂದಿದ್ದಾರೆ.
*ಲಾಕ್ ಡೌನ್ ಅವಧಿಯಲ್ಲಿ ಸರಕಾರ ನೀಡಿದ ಅಕ್ಕಿಯನ್ನು ನೀಡದೆ ಅಮಾನವೀಯ ರೀತಿಯಲ್ಲಿ ನಡವಳಿಕೆ ಮಾಡಿರುವ ಪಡಿತರ ಅಂಗಡಿ ಮಾಲೀಕ ನ ವಿರುದ್ಧ ಗ್ರಾಮದಲ್ಲಿ ಆಕ್ರೋಶ ವುಂಟಾಗಿದೆ* .





