



ಬಂಟ್ವಾಳ : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಡಿ.ವೈ.ಎಫ್.ಐ. ಬಂಟ್ವಾಳ ತಾಲೂಕು ಸಮಿತಿಯಿಂದ ಬಂಟ್ವಾಳ ಕೆಳಗಿನ ಮಂಡಾಡಿಯಲ್ಲಿ ಗಿಡಗಳ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಸಾಮಾಜಿಕ ಕಾರ್ಯಕರ್ತ ರಾಜ ಚೆಂಡ್ತಿಮಾರ್ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಮನೆ ಮತ್ತು ಹಿತ್ತಲುಗಳಲ್ಲಿ ಮತ್ತು ಪರಿಸರದಲ್ಲಿ ಗಿಡಗಳನ್ನು ನೆಡುವ ಮೂಲಕ ಪ್ರಕೃತಿಯನ್ನು ಉಳಿಸಲು ಮುಂದಾಗಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಡಿ.ವೈ.ಎಫ್.ಐ. ಬಂಟ್ವಾಳ ತಾಲೂಕು ಕಾರ್ಯದರ್ಶಿ ನ್ಯಾಯವಾದಿ ತುಳಸೀದಾಸ್ ವಿಟ್ಲ, ಉಪಾಧ್ಯಕ್ಷ ಸಾಧಿಕ್ ಬಂಟ್ವಾಳ, ದೇವದಾಸ್ ಕುಲಾಲ್, ಕಾರ್ಮಿಕ ಮುಖಂಡರಾದ ಉದಯ ಕುಮಾರ್ ಬಂಟ್ವಾಳ, ರಾಮಣ್ಣ ವಿಟ್ಲ, ಪ್ರಭಾಕರ ದೈವಗುಡ್ಡೆ ಮುಂತಾದವರು ಉಪಸ್ಥಿತರಿದ್ದರು. ಡಿ.ವಯ.ಎಫ್.ಐ ಬಂಟ್ವಾಳ ತಾಲೂಕು ಅಧ್ಯಕ್ಷ ಸುರೇಂದ್ರ ಕೋಟ್ಯಾನ್ ಸ್ವಾಗತಿಸಿ, ವಂದಿಸಿದರು.
ಪರಿಸರದ ನಾಗರಿಕರಿಗೆ ಸಸಿಗಳನ್ನು ವಿತರಿಸಲಾಯಿತು.





