ಧರ್ಮಸ್ಥಳ: ಸರಕಾರದ ಮಾರ್ಗಸೂಚಿಯಂತೆ ಹಾಗೂ ಕೊರೊನಾ ವೈರಸ್ ನಿಯಂತ್ರಿಸಲು ಮುಂಜಾಗರೂಕತೆಯನ್ನು ಅನುಸರಿಸಿ ಇಂದಿನಿಂದ ನಾಡಿನ ಪವಿತ್ರ ಕ್ಷೇತ್ರವಾದ ಶ್ರೀ ಕ್ಷೇತ್ರ ದರ್ಮಸ್ಥಳದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ.

ದೇವರ ದರ್ಶನ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದೆ. ದೇವಸ್ಥಾನ ಅರ್ಚಕರು, ರಕ್ಷಣಾ ಸಿಬ್ಬಂದಿಗಳು ಹಾಗೂ ನೌಕರರು ನೀಡುವ ಸಲಹೆ ಸೂಚನೆಗಳನ್ನು ಗಮನಿಸಿ ಭಕ್ತರು ಸಹಕರಿಸಬೇಕು ಎಂದು ಕೋರಲಾಗಿದೆ.

ಡಾ ಹೆಗ್ಗಡೆಯವರ ಭೇಟಿ ಸಮಯ:

ಭಕ್ತರು ದರ್ಮಾಧಿಕಾರಿಗಳನ್ನು ಬೆಳಿಗ್ಗೆ ಗಂಟೆ 9.30 ರಿಂದ ಮಧ್ಯಾಹ್ನ 12.30 ರ ವರೆಗೆ ಹಾಗೂ ಸಂಜೆ ಗಂಟೆ 4.00 ರಿಂದ 6.30 ರ ವರೆಗೆ ಭೇಟಿಗೆ ಅವಕಾಶವಿದೆ. ಭಕ್ತಾದಿಗಳಿಗೆ ಅನ್ನ ಪ್ರಸಾದ ಸೇವೆಯನ್ನು ಸರಕಾರದ ಮಾರ್ಗಸೂಚಿಯನ್ನು ಅನುಸರಿಸಿ ವ್ಯವಸ್ಥೆ ಮಾಡಲಾಗಿದೆ. ದೇವರ ದರ್ಶನಕ್ಕೆ ಬೆಳಿಗ್ಗೆ 6.30 ರಿಂದ 2.00 ಗಂಟೆ ಸಂಜೆ 5 ರಿಂದ 8 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here