



ನಾರಾವಿ: ಕುಕ್ಕುಜೆ ಎಂಬಲ್ಲಿ ಮೊನ್ನೆಯಷ್ಟೆ ಕುಸಿದು ಬಿದ್ದಿರುವಂತಹ ಸೇತುವೆ ಈಗ ತಾತ್ಕಾಲಿಕವಾಗಿ ನೆಲೆಕಂಡಿದೆ. ಮೇ27ರಂದು ಸಂಪೂರ್ಣವಾಗಿ ಕುಸಿದು ಬಿದ್ದಿದ್ದು. ಮೇ29ಕ್ಕೆ ಶಾಸಕ ಹರೀಶ್ ಪೂಂಜಾ ಭೇಟಿ ನೀಡಿ ಮಳೆಗಾಲ ಮುಗಿದ ಕೂಡಲೆ ಕಾಮಗಾರಿ ಪ್ರಾರಂಭಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ ಭರವಸೆಯನ್ನು ನೀಡಿದರು.
ಸಂಸದರ ಅನುದಾನದಡಿ ಹಣ ಬಿಡುಗಡೆಯಾಗಿ ಮೇ30 ಕ್ಕೆ ಕಾಮಗಾರಿ ಪ್ರಾರಂಭಗೊಂಡು ಜೂನ್6 ರಂದು ತಾತ್ಕಾಲಿಕ ಓಡಾಟಕ್ಕೆ ತಯಾರಾಯಿತು.
ಮೊಗರೋಡಿ ಕಂಟ್ರಕ್ಷನ್’ನವರು ಮತ್ತು ಊರ ಜನಹಿತ ಯುವ ಬಳಗ ನೇಲ್ಯ ಪಲಿಕೆ, ಪುರುಷರ ಬಳಗ, ಬಿಜೆಪಿ ಗ್ರಾಮ ಸಮಿತಿ 5 ಮತ್ತು 6ನೇ ವಾರ್ಡ್ ಸದಸ್ಯರು, ಶಿವ ಶಕ್ತಿ ಫ್ರೆಂಡ್ಸ್’ನ ಸದಸ್ಯರು ಊರ ಬಂಧುಗಳ ಶ್ರಮದಾನದ ಮೂಲಕ ಕಾಮಗಾರಿ ವೇಗವಾಗಿ ಪೂರ್ಣಗೊಂಡಿತು.
ನಾರಾವಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಯಶೋಧ, ಸದಸ್ಯ ಉದಯ್ ಹೆಗ್ಡೆ, ಪ್ರಮೀಳಾ ಭಟ್, ಸಮಾಜಿಕ ಕಾರ್ಯಕರ್ತ ರಾಮಚಂದ್ರ ಭಟ್ ಮೊದಲಾದವರ ಸಹಕಾರದೊಂದಿಗೆ ಕುಕ್ಕುಜೆ ಸೇತುವೆಯು ತಯರಾಗಿ ನಿಂತಿದೆ.





