Tuesday, October 17, 2023

ಮೊಡಂಕಾಪು: ವಿಶ್ವ ಪರಿಸರ ದಿನಾಚರಣೆ

Must read

ಬಂಟ್ವಾಳ : ಜಾಗತಿಕ ತಾಪಮಾನ ಏರುತ್ತಿರುವ ಈ ಜಟಿಲ ಸಂದರ್ಭದಲ್ಲಿ ನಮಗೆ ಉಳಿದಿರುವ ಏಕೈಕ ಮಾರ್ಗವೆಂದರೆ ಗಿಡ ನೆಡುವಿಕೆ ಮತ್ತು ಅವುಗಳ ಸಂರಕ್ಷಣೆ ಮಾತ್ರ ಎಂದು ಬಂಟ್ವಾಳ ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ಅಜೆಕಳ ಗಿರೀಶ್ ಭಟ್ ಹೇಳಿದರು.

ಬಿ.ಸಿ.ರೋಡಿನ ಮೊಡಂಕಾಪು ಸರಿದಂತರ ಪ್ರಕಾಶನದ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಅವರು ಮಾತನಾಡಿದರು.

ಪರಿಸರದ ಇರವಿನ ಸತ್ಯ ಹಾಗೂ ಅದರ ಒಳಗಿನ ಸತ್ವವನ್ನು ಅರಿತು ಬಾಳಿದಾಗ ಮಾತ್ರ ಆರೋಗ್ಯಪೂರ್ಣ ಬದುಕು ಸಾಧ್ಯ ಎಂದು ಪ್ರಕಾಶನದ ಸಂಚಾಲಕ ಪ್ರೊ.ರಾಜಮಣಿ ರಾಮಕುಂಜ ಹೇಳಿದರು.


ಗಿಡಗಳನ್ನು ನೆಡುವುದರ ಮೂಲಕ ಆಶಾ ಕಾರ್ಯಕರ್ತೆ ಮಮತಾ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಆಸಕ್ತರಿಗೆ ಗಿಡಗಳನ್ನು ಹಂಚಲಾಯಿತು. ಅರ್ಬಿತ್ತಾಯ ಧಾತ್ರಿ ಕಾರ್ಯಕ್ರಮ ವಂದಿಸಿದರು.

 

More articles

Latest article