Saturday, April 6, 2024

ನಾವು ನಾವಾಗಿ ಇರಬಯಸಿದರೆ……ಆತ್ಮ ನಿರ್ಭರ?

ನಾವು ನಮ್ಮ ತಲೆಯಲ್ಲಿ ಯೋಚಿಸುವ, ನಮ್ಮ ಕಾಲಲ್ಲೇ ನಿಲ್ಲುವ ನಮ್ಮ ಕಣ್ಣಲ್ಲೇ ನೋಡುವ, ನಮ್ಮದನ್ನೇ ಅನುಭವಿಸುವ. ನನ್ನನ್ನು ಎಷ್ಟೋ ಸಲ ಕಾಡಿದ್ದಿದೆ, ನಾವು ನಾವಾಗಿ ಜೀವಿಸುವುದು ಯಾವಾಗ? ಭಾರತದಲ್ಲಿದ್ದುಕೊಂಡು I was in England in 1968 ಹೀಗೆ ಆರಂಭವಾಗುತ್ತದೆ ನೋಡಿ ನಮ್ಮ ಮಾತು; ಅಂದರೆ ನಾನು ನನ್ನನ್ನು ಕಂಡುಕೊಳ್ಳುವುದು, ನನ್ನ ಯೋಚನೆಗಳು ಹುಟ್ಟಿಕೊಳ್ಳುವುದು ಅಮೇರಿಕದಲ್ಲೋ ಇಂಗ್ಲೆಂಡಲ್ಲೋ ಜರ್ಮನಿಯಲ್ಲೋ. ಯಾಕೆ ನಾವು ಭಾರತದಲ್ಲಿದ್ದೇವೆ ಅನ್ನುವ ಅರಿವಿಲ್ಲ!? ಉತ್ತಮಾಂಶಗಳಿಗೆಲ್ಲಾ ವಿದೇಶ, ಕೆಟ್ಟ ವಿಚಾರಗಳಿಗೆಲ್ಲಾ ಸ್ವದೇಶ; ಆದರೆ ಈ ದೇಶದೊಂದಿಗಿನ ನಮ್ಮ ಸಂಬಂಧ, ಜವಾಬ್ದಾರಿ ಎಂತಹದ್ದು ಈ ಕುರಿತಾಗಿ ನಾವು ಯೋಚಿಸುವುದೇ ಇಲ್ಲ. ವಿದೇಶದಿಂದ ಬಂದ ತಕ್ಷಣ ಅಲ್ಲಿನ ಶುಚಿತ್ವ ನನ್ನನ್ನು ಇಲ್ಲಿ ಕಾಡುತ್ತದೆ, ಹಾಗಾದರೆ ಇಲ್ಲಿನ ನೈರ್ಮಲ್ಯಕ್ಕೆ ಯಾರು ಕಾರಣ?
ವಿದೇಶೀಯ ಯೂಸ್ ಅಂಡ್ ತ್ರೋ ಕಲ್ಚರಿಗೆ ದಾಸರಾಗುವಾಗ ನಮಗೆ ದುಃಖವಾಗುವುದಿಲ್ಲ, ದೇಶೀಯ ಉತ್ಪನ್ನಗಳು ಅಂದಾಗ ಕಣ್ಣೀರು ಹಾಕುತ್ತೇವೆ. ನಮ್ಮದೇ ಹಿತ್ತಲಿನ ಗಿಡ ಮದ್ದಲ್ಲ, ಆದರೆ ಅದುವೇ ವಸ್ತು ವಿದೇಶೀ ಮುದ್ರೆ ಒತ್ತಿ ಬಂದಾಗ ಶರಣಾಗುತ್ತೇವೆ.
ಆಶ್ಚರ್ಯ ನೋಡಿ, ನಮಗೆ ಕುಡಿತಕ್ಕೂ ವಿದೇಶಿ ದುಡಿತಕ್ಕೂ ವಿದೇಶಿ. ಇದು ಸ್ವಾರ್ಥವೋ ಪರಮಾರ್ಥವೋ ಅನ್ನುವುದಕ್ಕೆ ಮನೋಚಿಕಿತ್ಸೆ ಆಗಬೇಕು. ಹೆಚ್ಚಿನಂಶ ಲಕೋಟೆ ಹಾಲನ್ನೇ ಕುಡಿದು ಬದುಕುವ ಮಗುವಿಗೆ ಹಾಲು ಎಲ್ಲಿಂದ ಬರುತ್ತದೆ ಅನ್ನುವುದು ಗೊತ್ತಾಗುವುದಾದರೂ ಹೇಗೆ? ಅದು ಎಲ್ಲದರಿಂದಲೂ ವಂಚಿತ. ಅದು ಹುಟ್ಟಿದ್ದು ಫ್ಯಾನಿನ ಅಡಿಯಲ್ಲಿ, ಕುಡಿದದ್ದು ಬಾಟ್ಲಿ ಹಾಲು, ತಿಂದದ್ದು ಫೆರೆಕ್ಸ್, ಕೇಳಿದ್ದು ಹೆಲೋ. ‘ಪಡುವಲದ ಗಾಳಿ ಬೀಸಿದರೆ ಆಡುವುದು ಅಟ್ಟೆ’ ಅಡಿಗರ ಈ ಮಾತು ನಿಜಕ್ಕೂ ಅರ್ಥಪೂರ್ಣ. ಇಂತಹ ಸ್ಥಿತಿಯಲ್ಲಿ ಸಹಜ ವಸ್ತುಗಳರಿವಾದರೂ ಆ ಮಗುವಿಗೆ ಹೇಗೆ ಬರಬೇಕು?
ಮುಂದುವರಿಯುತ್ತದೆ…..

✍️ ರಾಜಮಣಿ ರಾಮಕುಂಜ

More from the blog

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...

ಮಿತಿ ಮೀರಿದ ತಾಪಮಾನ : ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿರು ಬಿಸಿಲು ಹೆಚ್ಚಳವಾಗುತ್ತಿದ್ದು ಮುಂದಿನ 14 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​...

ಮನೆಯ ಮಹಡಿಯಿಂದ ಬಿದ್ದು ಬಾಲಕ ಸಾವು

ಬಂಟ್ವಾಳ: ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಎ.‌ ೧ರ ಮುಂಜಾನೆ ನಡೆದಿದೆ. ಬಂಟ್ವಾಳ ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ಆದಿಶ್(೧೫) ಮೃತಪಟ್ಟ ಬಾಲಕ. ಆತ ಮನೆಯಲ್ಲಿ ದೊಡ್ಡಮ್ಮನ...

ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಶಾಕ್.. ಕೋಳಿ ಮಾಂಸದ ದರ ಏರಿಕೆ

ಮಂಗಳೂರು: ಕೋಳಿಮಾಂಸ, ಮೀನಿನ ದರ ಏರುಗತಿ ಯಲ್ಲಿ ಸಾಗುತ್ತಿದ್ದು ಮಾಂಸಾಹಾರ ಪ್ರಿಯರ ಜೇಬಿಗೂ ಕತ್ತರಿ ಬೀಳುವಂತಾಗಿದೆ. ಪ್ರಸ್ತುತ ಕೋಳಿಮಾಂಸಕ್ಕೆ (ವಿದ್‌ ಸ್ಕಿನ್‌) ಕೆ.ಜಿ.ಗೆ ಬ್ರಾಯ್ಲರ್‌ ಕೆಲವು ಕಡೆ 235-240 ರೂ., ಟೈಸನ್‌ 270 ರೂ....