






ಉಳ್ಳಾಲ: ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಯುವಕ ಹಾಗೂ ಯುವತಿ ಗಂಭೀರ ಗಾಯಗೊಂಡಿರುವ ಘಟನೆ ಕೋಟೆಕಾರು ಬೀರಿ ಬಳಿ ನಡೆದಿದೆ.
ಕನೀರುತೋಟ ನಿವಾಸಿ ಸೃಜನ್(18), ಕೋಟೆಕಾರು ನಿವಾಸಿ ಪ್ರಿಯಾ(21) ಗಂಭೀರವಾಗಿ ಗಾಯಗೊಂಡವರು.
ಕೋಟೆಕಾರು ಮನೆಯಿಂದ ಬೀರಿ ಜಂಕ್ಷನ್ ನ ಅಂಗಡಿಗೆ ಪೆನ್ ತರಲೆಂದು ಇಬ್ಬರು ಬೈಕಿನಲ್ಲಿ ತೆರಳಿದ್ದರು. ಅಲ್ಲಿಂದ ವಾಪಸ್ಸಾಗುವಾಗ ಸರ್ವಿಸ್ ರಸ್ತೆಯಲ್ಲಿ ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ಬೈಕ್ ಮುಖಾಮುಖಿ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಸೃಜನ್ ಕೈಗೆ ಗಾಯವಾಗಿದೆ ಹಾಗೂ ಪ್ರಿಯಾ ತಲೆಗೆ ಗಂಭೀರವಾಗಿ ಗಾಯವಾಗಿದೆ. ಇಬ್ಬರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಗುರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





