ಬಂಟ್ವಾಳ: ಘನತ್ಯಾಜ್ಯ ನಿರ್ವಹಣೆ ಮಾಡುವ ಹತ್ತು ಗ್ರಾ.ಪಂ.ಮಟ್ಟದ ಸಿಬ್ಬಂದಿ ಗಳಿಗೆ ರಕ್ಷಣಾ ಸಾಧನ ಹಾಗೂ ಗ್ರಾ.ಪಂ.ಸಿಬ್ಬಂದಿಗಳಿಗೆ ತಾ.ಪಂ.ವತಿಯಿಂದ ನೀಡಿದ ಕಿಟ್ ನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ವಿತರಿಸಿದರು.


ಬಳಿಕ ಮಾತನಾಡಿದ ಅವರು,ಮನಃಪೂರ್ವಕವಾಗಿ ಅಧಿಕಾರಿಗಳು ಕೆಲಸ ನಿರ್ವಹಿಸಿದರೆ ಎಲ್ಲಿಯೂ ಸಮಸ್ಯೆಗಳು ಬರಲು ಸಾಧ್ಯವಿಲ್ಲ.ಅಧಿಕಾರಿಗಳ ಉದಾಸೀನ ಮನೋಭಾವದಿಂದ ಮಾತ್ರ ತ್ಯಾಜ್ಯ ನಿರ್ವಹಣೆ ಜೊತೆ ಇನ್ನು ಅನೇಕ ಸಮಸ್ಯೆ ಗಳು ತಲೆದೋರಿದೆ.ತಾಲೂಕಿನ 58 ಗ್ರಾ.ಪಂ.ಗಳಲ್ಲಿ ಈರೆಗೆ ಕೇವಲ ಹತ್ತು ಗ್ರಾ.ಪಂ.ಗಳಲ್ಲಿ ಪೂರ್ಣಪ್ರಮಾಣದ ಘನ ತ್ಯಾಜ್ಯ ನಿರ್ವಹಣಾ ಘಟಕಗಳು ನಿರ್ಮಾಣವಾಗಿದೆ, ಪ್ರಸಕ್ತ ಸಮಯದಲ್ಲಿ ಇದು ಉತ್ತಮ ಬೆಳವಣಿಗೆ ಅಲ್ಲ ಎಂದು ಅವರು ಹೇಳಿದರು.ಮುಂದಿನ ದಿನಗಳಲ್ಲಿಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಸರಿಯಾದ ರೀತಿಯಲ್ಲಿ ಮಾಡಲು ಕ್ರಮಕೈಗೊಳ್ಳಲು ಅವರು ಸೂಚಿಸಿದರು.

ಟಾಸ್ಕಪೋರ್ಸ್ ಸಮಿತಿಯನ್ನು ಇನ್ನಷ್ಟು ಬಲಗೊಳಿಸುವ ಬಗ್ಗೆ ಮಾತನಾಡಿದ ಅವರು
ಮುಂದಿನ ದಿನಗಳಲ್ಲಿ ಬೂತ್ ಮಟ್ಟದಲ್ಲಿ ಟಾಸ್ಕಪೋರ್ಸ್ ಸಮಿತಿಗೆ ಜವಬ್ದಾರಿ ನೀಡಲಾಗುತ್ತದೆ.
ಕೊರೊನಾ ಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಕ್ರಮವಹಿಸಿಕೊಳ್ಳಲು ಮುಂದಿನ ಜವಬ್ದಾರಿ ಯನ್ನು ನೀಡಲಾಗುತ್ತದೆ, ವ್ಯವಸ್ಥಿತವಾಗಿ ಕೆಲಸ ನಿರ್ವಹಿಸಲು ಶಾಸಕರು ಅಧಿಕಾರಿಗಳಿಗೆ ತಿಳಿಸಿದರು.
ಹೊರರಾಜ್ಯದಿಂದ ಬರುವ ವ್ಯಕ್ತಿಗಳಿಗೆ ಕ್ವಾರಂಟೈನ್ ವ್ಯವಸ್ಥೆ ವಿಚಾರದಿಂದ ಮುಂದಿನ ದಿನಗಳ ಎಲ್ಲಾ ರೀತಿಯ ಕಾರ್ಯಗಳಿಗೆ ಟಾಸ್ಕಪೋರ್ಸ್ ಸಮಿತಿ ರೆಡಿಯಾಗಿರುವಂತೆ ಅವರು ಪಿ.ಡಿ.ಒ.ಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿಯ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ, ತಾ.ಪಂ.ಇ.ಒ.ರಾಜಣ್ಣ ,ಸಹಾಯಕ ಕಾರ್ಯನಿರ್ವಹಕ ಅಧಿಕಾರಿ ತಾರಾನಾಥ ಸಾಲ್ಯಾನ್, ಮ್ಯಾನೇಜರ್ ಶಾಂಭವಿರಾವ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here