Wednesday, October 18, 2023

ಮುಂದಿನ ಒಂದು ವರ್ಷ ಯಾವುದೇ ನೂತನ ಯೋಜನೆಗಳ ಘೋಷಣೆ ಇಲ್ಲ – ಕೇಂದ್ರ ಸರ್ಕಾರ

Must read

ನವದೆಹಲಿ: ದೇಶದಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವುದರಿಂದ ಆರ್ಥಿಕತೆಯ ಮೇಲೆ ಈಗಾಗಲೇ ಗಂಭೀರವಾಗಿ ಪರಿಣಾಮ ಬೀರಿದ್ದು, ಈ ಹಿನ್ನೆಲೆ ಮುಂದಿನ ಒಂದು ವರ್ಷದ ಕಾಲ ಯಾವುದೇ ರೀತಿಯ ನೂತನವಾದ ಯೋಜನೆಗಳನ್ನು ಘೋಷಣೆ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಇದಕ್ಕೆ ಸಂಬಂಧಪಟ್ಟಂತೆ ಆದೇಶ ಹೊರಡಿಸಿರುವ ಕೇಂದ್ರ ವಿತ್ತ ಸಚಿವಾಲಯವು, ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯಗಳು ಯೊಸ ಯೋಜನೆಗಳಿಗೆ ಹಣಕಾಸು ಅನುಮೋದನೆ ಕೋರಿ ಪ್ರಸ್ತಾವನೆ ಸಲ್ಲಿಸುವುದನ್ನು ನಿಲ್ಲಿಸಬೇಕು. ಈಗಾಗಲೇ ಕೊರೊನಾ ವೈರಸ್‌‌ ನೀಡಿರುವ ಆರ್ಥಿಕ ಹೊಡೆತದಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಮಾತ್ರ ಹಣಕಾಸಿನ ನೆರವು ಕಲ್ಪಿಸಲಾಗುತ್ತದೆ ಎಂದು ತಿಳಿಸಿದೆ. ಕೊರೊನಾ ವೈರಸ್‌‌ ವಿರುದ್ದದ ಹೋರಾಟಕ್ಕಾಗಿ ಸಂಪನ್ಮೂಲ ಕ್ರೋಢಿಕರಣ ಮಾಡಬೇಕಿದ್ದು, ಇದಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಒಂದು ವರ್ಷದ ಅವಧಿಗೆ ಕೇಂದ್ರ ಸರ್ಕಾರದ ಯಾವುದೇ ನೂತನ ಯೋಜನೆಗಳನ್ನು ಘೋಷಣೆ ಮಾಡುವುದಿಲ್ಲ ಎಂದು ಹೇಳಿದೆ.
ಪ್ರಧಾನಮಂತ್ರಿಗಳ ಗರೀಬ್‌‌‌ ಕಲ್ಯಾಣ್‌‌ ಯೋಜನೆಗೆ ಅನುದಾನ ದೊರೆಯಲಿದ್ದು, ಉಳಿದ ಎಲ್ಲಾ ಯೋಜನೆಗಳಿಗೆ ಪ್ರಸ್ತುತ ಇರುವ ಅನುದಾನವನ್ನು ಮಾತ್ರ ಬಳಕೆ ಮಾಡಿಕೊಳ್ಳಬೇಕು. ತಮ್ಮ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳು ಸ್ಥಗಿತಗೊಳಿಸಬೇಕು.ಹಣಕಾಸು ಇಲಾಖೆಯ ಯಾವ ನೂತನವಾದ ಯೋಜನೆಗಳಿಗೂ ಕೂಡಾಅನುದಾನವನ್ನು ನೀಡುವುದಿಲ್ಲ ಎಂದಿದ್ದಾರೆ.

ಕೃಷಿ ವಲಯ, ಉದ್ಯಮ ವಲಯ, ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ವಿಶೇಷ ಆರ್ಥಿಕ ಪ್ಯಾಕೇಜ್’ನ್ನು ಮೋದಿ ಸರ್ಕಾರ ಘೋಷಣೆ ಮಾಡಿದೆ. ಆದರೆ, ಕೊರೊನಾ ವೈರಸ್‌‌ ವಿರುದ್ದ ಹೋರಾಟ ನಡೆಸಲು ಸಂಪನ್ಮೂಲದ ಕ್ರೋಢೀಕರಣ ಮಾಡಬೇಕಿರುವ ನಿಟ್ಟಿನಲ್ಲಿ ನೂತನ ಯೋಜನೆ ಘೋಷಣೆ ಮಾಡದಿರಲು ತೀರ್ಮಾನಿಸಲಾಗಿದೆ. ಕೊರೊನಾ ವಿರುದ್ದದ ಹೋರಾಟಕ್ಕೆ ಅನುದಾನ ನೀಡಬೇಕಿದ್ದು, ಪ್ರಸಕ್ತ ವರ್ಷದಲ್ಲಿ ಹಣಕಾಸು ಪರಿಸ್ಥಿತಿಯನ್ನು ನಿಭಾಯಿಸಬೇಕಿದೆ ಎಂದಿದೆ.
ಕೊರೊನಾ ವೈರಸ್‌ನಿಂದ ಉಂಟಾದ ಆರ್ಥಿಕತೆಯಿಂದ ದೇಶವನ್ನು ಮೇಲಕ್ಕೆತ್ತಲು ಎಲ್ಲಾ ವರ್ಗಗಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರವು ರೂ.20 ಲಕ್ಷ ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಬಿಡುಗಡೆ ಮಾಡಿದೆ. ಈ ವಿಶೇಷ ಆರ್ಥಿಕ ಪ್ಯಾಕೇಜ್‌‌‌ ಅನ್ನು ವಿಶ್ವದ ಮೂರನೇ ಅತೀದೊಡ್ಡ ಆರ್ಥಿಕ ಪ್ಯಾಕೇಜ್‌‌‌ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.

More articles

Latest article