


ನವದೆಹಲಿ : ಕೇರಳದಲ್ಲಿ ಗರ್ಭಿಣಿ ಕಾಡಾನೆ ಸಾವಿನ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಪ್ರಕರಣಕ್ಕೆ ಕಾರಣಕರ್ತರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಈ ಬಗ್ಗೆ ಕೇರಳ ಸರ್ಕಾರದಿಂದ ವಿಸ್ತೃತ ವರದಿಯನ್ನು ಕೇಳಿದ್ದೇವೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ಕೇರಳದಲ್ಲಿ ಗರ್ಭಿಣಿ ಕಾಡಾನೆ ಸಾವಿನ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಇದಕ್ಕೆ ಕಾರಣಕರ್ತರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಈ ಬಗ್ಗೆ ಕೇರಳ ಸರ್ಕಾರದಿಂದ ವಿಸ್ತೃತ ವರದಿಯನ್ನು ಕೇಳಿದ್ದೇವೆ. ಹಣ್ಣಿನೊಳಗೆ ಪಟಾಕಿ ತುಂಬಿಸಿ ಪ್ರಾಣಿಗಳನ್ನು ಸಾಯಿಸುವುದು ಅತ್ಯಂತ ಹೀನಕೃತ್ಯ, ಇದು ಭಾರತೀಯ ಸಂಸ್ಕೃತಿಯಲ್ಲ ಎಂದಿದ್ದಾರೆ. ಅದಲ್ಲದೇ, ಗರ್ಭಿಣಿ ಆನೆಯನ್ನು ಕೊಂದು ಹಾಕಿರುವ ಘಟನೆಗೆ ಸಂಬಂಧಪಟ್ಟಂತೆ ವನ್ಯಜೀವಿ ಅಪರಾಧ ತನಿಖಾ ತಂಡದ ಮೂಲಕ ತನಿಖೆ ಮಾಡಲಾಗುವುದು ಎಂದು ಕೇರಳ ಸರ್ಕಾರ ಪ್ರಕಟಿಸಿದೆ.
ಈ ಘಟನೆಯ ಬಗ್ಗೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು, ಅಪಾರ ಖಂಡನೆ ವ್ಯಕ್ತವಾಗುತ್ತಿದ್ದಂತೆ ಕಾಡಾನೆ ಸಾವಿನ ಬಗ್ಗೆ ಪ್ರಾಥಮಿಕ ತನಿಖೆಗೆ ಆದೇಶ ಹೊರಡಿಸಿ ಸಾವಿಗೆ ಕಾರಣರಾದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಸದ್ಯ, ಘಟನೆ ನಡೆದ ಪ್ರದೇಶದಲ್ಲಿ ಕೋಝಿಕ್ಕೋಡ್ನಿಂದ ವನ್ಯಜೀವಿ ಅಪರಾಧ ತನಿಖಾ ತಂಡ ಆಗಮಿಸಿ ತನಿಖೆ ಮಾಡುತ್ತಿದೆ ಎಂದು ತಿಳಿಸಿದರು.





