ಬಂಟ್ವಾಳ: ತಾಲೂಕಿನ ವಿಟ್ಲ ಪಟ್ಟಣವು ತಾಲೂಕಿಗೆ ಅರ್ಹತೆ ಇರುವ ಪಟ್ಟಣ. ಕೆಲವು ವರ್ಷಗಳ ಹಿಂದೆ ಗ್ರಾಮ ಪಂಚಾಯತ್ ನಿಂದ ಪಟ್ಟಣ ಪಂಚಾಯತ್ ಆಗಿ ಮೇಲ್ಧರ್ಜೆಗೊಂಡಿರುತ್ತದೆ. ವಿಟ್ಲ ಪಟ್ಟಣವನ್ನು ಆಸುಪಾಸಿನ ಹಲವಾರು ಊರುಗಳ ಜನ ಆಶ್ರಯಿಸಿಕೊಂಡಿರುತ್ತಾರೆ. ಅಲ್ಲದೆ ಹೆಚ್ಚಿನ ಜನವಸತಿ ಇರುವ ಪಟ್ಟಣವಾಗಿದೆ. ಕೇಂದ್ರ ಸರಕಾರವು ಜನರಿಗೆ ಕಡಿಮೆ ಬೆಲೆಗೆ ಔಷಧಿಗಳನ್ನು ದೊರಕಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಎಲ್ಲಾ ಪಟ್ಟಣಗಳಲ್ಲಿ ಜನೌಷಧಿ ಕೆಂದ್ರಗಳನ್ನು ಮಂಜೂರು ಮಾಡಿರುತ್ತದೆ. ಆದರೆ ವಿಟ್ಲದ ಜನತೆಗೆ ಇದರ ಪ್ರಯೋಜನ ಪಡೆಯಲು ಕಷ್ಟಸಾದ್ಯವಾಗಿದೆ.

ವಿಟ್ಲದಲ್ಲಿ ಈಗಾಗಲೇ ಒಂದು ಜನೌಷಧಿ ಕೇಂದ್ರ ಇದ್ದರೂ ಅದು ಖಾಸಗಿ ಮೆಡಿಕಲ್ ಜೊತೆಯಲ್ಲೆ ಇದ್ದು ಇಲ್ಲಿ ಜನರಿಗೆ ಬೇಕಾದ ಔಷಧಿಗಳು ಕೆಲ ಸಂಧರ್ಭಗಳಲ್ಲಿ ಲಭ್ಯವಿರುವುದಿಲ್ಲ. ಇಂದು ಜನರಿಗೆ ದುಭಾರಿ ಬೆಲೆ ನೀಡಿ ಔಷಧಿಗಳನ್ನು ಖರೀಧಿಸಲು ಕಷ್ಟಸಾದ್ಯವಾಗಿದೆ. ಸರಕಾರವು ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಜನೌಷಧಿ ಯೋಜನೆಯನ್ನು ಜಾರಿಗೊಳಿಸಿದ್ದು, ಆದರೆ ವಿಟ್ಲದ ಜನತೆಗೆ ಇದರ ಪ್ರಯೋಜನ ಮರೀಚಿಕೆಯಾಗಿದೆ. ವಿಟ್ಲದ ಜನತೆಗೆ ಕೂಡಾ ಕಡಿಮೆ ಬೆಲೆಗೆ ಔಷಧಿ ದೊರಕುವಂತಾಗಲು ವಿಟ್ಲ ಪಟ್ಟಣಕ್ಕೆ ಒಂದು ಪ್ರತ್ಯೇಕ ಜನೌಷಧಿ ಕೇಂದ್ರವನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿ ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿ ವತಿಯಿಂದ ವಿಟ್ಲ ನಾಡಕಛೇರಿ ಉಪ ತಹಶೀಲ್ದಾರರ ಮುಖಾಂತರ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು. ನಿಯೋಗದಲ್ಲಿ ತಾಲೂಕು ಕಾರ್ಯದರ್ಶಿ ತುಳಸೀದಾಸ್ ವಿಟ್ಲ, ವಿಟ್ಲ ವಲಯ ಸಮಿತಿ ಅಧ್ಯಕ್ಷ ನಿಜುಂ ಅಳಿಕೆ, ಮುಖಂಡರಾದ ತಮೀಮ್.ಎಂ.ಕೆ , ಜಲೀಲ್ ಅಳಿಕೆ ಮುಂತಾದವರು ಇದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here