ಬೆಳ್ತಂಗಡಿ: ತಾಲೂಕಿನ ಜಶನ್ ಗೃೂಪ್ಸ್ ಮಾಲೀಕ, ಬೆಳ್ತಂಗಡಿ ಯುವವಾಹಿನಿ(ರಿ.) ಘಟಕದ ಸಲಹೆಗಾರ ಪ್ರಶಾಂತ್ ಕೋಟ್ಯಾನ್ ಅವರ ಮಗನ ಹುಟ್ಟುಹಬ್ಬವನ್ನು ಅಪಘಾತ ಹಾಗೂ ಅಕಸ್ಮಿಕ ಘಟನೆಗಳಿಂದ ತೊಂದರೆಗೊಳಗಾದ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳ ಕಿಟ್ ಹಾಗೂ ಧನ ಸಹಾಯ ನೀಡುವ ಮೂಲಕ ಆಚರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಹುಟ್ಟುಹಬ್ಬವನ್ನು ಹಬ್ಬದ ರೀತಿ ಮಾಡಿ ಮನೆಯವರೆ ಸಂತಸ ಪಡುವ ಈ ಕಾಲದಲ್ಲಿ ತಾಲೂಕಿನ ಜಶನ್ ಗೃೂಪ್ಸ್ ಮಾಲೀಕರು,  ಬೆಳ್ತಂಗಡಿ ಯುವವಾಹಿನಿ(ರಿ.) ಘಟಕದ ಸಲಹೆಗಾರ ಪ್ರಶಾಂತ್ ಕೋಟ್ಯಾನ್ ಅವರು ತಮ್ಮ ಮಗ ಜಶನ್ ನ ಏಳನೇ ವರ್ಷದ ಹುಟ್ಟು ಹಬ್ಬವನ್ನು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಶಿರ್ಲಾಲು ಗ್ರಾಮದ ಗರಡಿ ಬಳಿಯ ನಿವಾಸಿ ಪ್ರಸ್ತುತ ಬೆಳ್ತಂಗಡಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸತೀಶ್ ಅವರ ಕುಟುಂಬಕ್ಕೆ, ಮೂಂಡುರು ಗ್ರಾಮದ ಹಿಮರಡ್ಡ ರೇವತಿ ಅವರ ಕುಟುಂಬಕ್ಕೆ, ಕಲ್ಲಂಡ ಮನೆಯ ವಸಂತ ಪೂಜಾರಿ ಅವರ ಕುಟುಂಬಕ್ಕೆ ಹಾಗೂ ಕಲ್ಮಂಜ ಅಕ್ಷಯ ನಗರ ನಿವಾಸಿ ರಾಜು ಪೂಜಾರಿ ಹಾಗು ಬೆಳ್ತಂಗಡಿ ಹುಣ್ಸೆಕಟ್ಟೆ ನಿವಾಸಿ ಕುಸುಮಾವತಿ ಇವರ ಮನೆಗೆ ತೆರಳಿ ದಿನಸಿ ಸಾಮಾಗ್ರಿಗಳು ಮತ್ತು ಧನಸಹಾಯ ಸಹಾಯ ನೀಡಿ ತನ್ನ ಮಗನ ಹುಟ್ಟು ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದರು.

ಈ ಸಂದರ್ಭದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕದ ಸಂಘಟನ ಕಾರ್ಯದರ್ಶಿ ಕರುಣಾಕರ ಬೆಳ್ತಂಗಡಿ, ನಿರಂಜನ್ ಕಡಂಬು,  ಯುವವಾಹಿನಿ ಕೇಂದ್ರ ಸಮಿತಿ ನಿರ್ದೇಶಕ ಪ್ರಶಾಂತ್ ಮಚ್ಚಿನ ಹಾಗೂ ಬೋಜ ಪೂಜಾರಿ ಮಜಲು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here