ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ಭಾರತ ದೇಶ ಜಾಗತೀಕ ಮಟ್ಟದಲ್ಲಿ ಟಾಪ್‌ 10 ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ. ನಿನ್ನೆ ಅಷ್ಟೇ 8ನೇ ಸ್ಥಾನದಲ್ಲಿದ್ದ ಭಾರತ ಇಂದು ಏಳನೇ ಸ್ಥಾನಕ್ಕೇರಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಕೊರೊನಾ ವೈರಸ್‌‌‌ ಟ್ರ್ಯಾಕರ್​ನ ಪ್ರಕಾರ ಭಾರತದಲ್ಲಿ 1,82,143 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಭಾನುವಾರ ರಾತ್ರಿ 10.30ರ ಡೇಟಾ ಪ್ರಕಾರ ಜಾಗತಿಕವಾಗಿ ಒಟ್ಟು 59,34,936 ಕೊರೊನಾ ಪ್ರಕರಣ ದಾಖಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಕೊರೊನಾ ಟ್ರ್ಯಾಕರ್ ನ ಆಧಾರಲ್ಲಿ ಭಾರತ ಅತಿಹೆಚ್ಚು ಸೋಂಕಿತರ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಏರಿದೆ.
ಪ್ರಥಮ ಸ್ಥಾನದಲ್ಲಿ ಅಮೆರಿಕ ನಂತರ ಮುಂದುವರಿದು ಬ್ರೆಜಿಲ್, ರಷ್ಯಾ, ಬ್ರಿಟನ್​, ಸ್ಪೇನ್​, ಇಟಲಿ ಇವೆ. ಅಮೆರಿಕದಲ್ಲಿ ಒಟ್ಟು 17,16,078 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಜರ್ಮನಿಯಲ್ಲಿ 1,81,482, ಟರ್ಕಿಯಲ್ಲಿ 1,63,103, ಇರಾನ್​ನಲ್ಲಿ 1,48,950 ಪ್ರಕರಣಗಳು ದಾಖಲಾಗಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿವೆ.
ಈವರೆಗೆ ಭಾರತದಲ್ಲಿ ಗರಿಷ್ಟ ಏರಿಕೆಯಾಗಿದ್ದು, ಭಾನುವಾರ 8,380 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದೆ. ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1,82,143ಕ್ಕೆ ಏರಿಕೆಯಾಗಿದೆ. ಅದಲ್ಲದೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 5,164 ಆಗಿದ್ದು, 89,995 ಸಕ್ರಿಯ ಪ್ರಕರಣಗಳಿವೆ. 86,983 ರೋಗಿಗಳು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ರಿಕವರಿ ಡೇಟಾ ಶೇ. 47.76 ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಡೇಟಾ ಮಾಹಿತಿ ನೀಡಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here