


ಬಂಟ್ವಾಳ :ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೃಷ್ಣಾಪುರ ನಿವಾಸಿ ಸರೋಜಾ ಎನ್ನುವ ಮಹಿಳೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕಾರಣದಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ತುರ್ತಾಗಿ ಮೂರು ತಿಂಗಳ ಹೊಂದೆ ದಾಖಲಾಗಿದ್ದರು. ಕಡು ಬಡವರಾದ ಇವರ ಗಂಡ ಕೆಲವು ವರ್ಷಗಳ ಹಿಂದೆ ಕುಟುಂಬವನ್ನು ತೊರೆದು ಹೋಗಿದ್ದು, ಕಳೆದ ಒಂದು ತಿಂಗಳ ಹಿಂದೆಯೇ ರೋಗಿ ಗುಣಮುಖರಾಗಿದ್ದರೂ ಡಿಸ್ಚಾರ್ಜ್ ಮಾಡಿ ಹಣ ಪಾವತಿಸಲು ಸಾಧ್ಯವಾಗಿರಲಲ್ಲ. ಇಂತಹಾ ಕಷ್ಟದ ಸಮಯದಲ್ಲಿ ಸಹಾಯ ಮಾಡಲು ಯಾರೂ ಇಲ್ಲದೆ ಕಂಗಾಲಾಗಿದ್ದ ರೋಗಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿಯೇ ಬಾಕಿಯಾಗಿದ್ದರು. ವಿಷಯ ತಿಳಿದು ತಕ್ಷಣ ಸ್ಪಂದಿಸಿದ #ಆಲ್_ಇಂಡಿಯಾ_ಮುಸ್ಲಿಂ_ಡೆವಲಪ್ಮೆಂ ಟ್_ಫಾರಂ ಇದರ ರಾಜ್ಯ ಉಪಾಧ್ಯಕ್ಷರಾಗಿರುವ ಅಬೂಬಕರ್ ಸಜಿಪ ಇವರ ಫ್ಯಾಮಿಲಿ ಟ್ರಸ್ಟ್ ಆದ #ಸಜಿಪ_ಹಾಜಿ_ಅಬ್ದುಲ್_ಖಾದರ್_ಫ್ಯಾ ಮಿಲಿ_ಅಸೋಸಿಯೇಷನ್ ಅವರು ಆಸ್ಪತ್ರೆಯ ಬಿಲ್ ಭರಿಸುವ ಭರವಸೆ ನೀಡುವ ಮೂಲಕ ರೋಗಿಯನ್ನು ಸಂತೈಸಿ, #ಸಜಿಪ_ಹಾಜಿ_ಅಬ್ದುಲ್_ಖಾದರ್_ಫ್ಯಾಮಿಲಿ_ಅಸೋಸಿಯೇಷನ್ ಹೆಸರಿನ ಅವರದೇ ಕುಟುಂಬ ಸದಸ್ಯರ ಟ್ರಸ್ಟ್ ಮೂಲಕ ಬೃಹತ್ ಮೊತ್ತದ ಹಣ ಹೊಂದಿಸಿ ಇದರ ಅಧ್ಯಕ್ಷ ರಾದ ಎಂ.ಕೆ. ಅಬ್ದುಲ್ ಖಾದರ್ ಹಾಜಿ ಹಾಗೂ ಇದರ ಸದಸ್ಯರೂ ಆದ ಎಸ್.ಅಬೂಬಕ್ಕರ್ ಸಜೀಪ ಖುದ್ದಾಗಿ ಆಸ್ಪತ್ರೆಗೆ ತೆರಳಿ ರೋಗಿಯನ್ನು ಡಿಸ್ಚಾರ್ಜ್ ಮಾಡಿಸಿ ಅವರದೇ ಕಾರಿನಲ್ಲಿ ಸ್ವತಹಾ ಮೂಡಿಗೆರೆ ವರೆಗೆ ಕರೆದುಕೊಂಡು ಹೋಗಿ ಅವರ ಕುಟುಂಬಕ್ಕೆ ಒಂದು ತಿಂಗಳಿಗೆ ಬೇಕಾದ ಆಹಾರ ಸಾಮಗ್ರಿಗಳನ್ನು ಕೊಟ್ಟು ಮನೆಗೆ ಮರಳಿ ಮುಟ್ಟಿಸುವ
ಮೂಲಕ ಮಾನವೀಯತೆ ಮೆರೆದಿದ್ದಾರೆ.
ಎಂ.ಕೆ. ಅಬ್ದುಲ್ ಖಾದರ್ ಹಾಜಿ ಹಾಗೂ ಇದರ ಸದಸ್ಯರೂ ಆದ ಎಸ್.ಅಬೂಬಕ್ಕರ್ ಸಜೀಪ ಹಾಗೂ ಅವರ ಫ್ಯಾಮಿಲಿ ಅಸೋಸಿಯೇಷನ್ ನ ಎಲ್ಲಾ ಸಹೋದರರು ಯಾವುದೇ ಜಾತಿ ಧರ್ಮ ನೋಡದೆ ಸದಾ ಜೀವಪರ ಕೆಲಸಗಳಲ್ಲಿ ತಮ್ಮನ್ನು ತಾನು ತೊಡಗಿಸಿಕೊಂಡಿರುವವರಾಗಿದ್ದು, ಕೋಮು ವೈಷಮ್ಯ ತುಂಬಿರುವ ಹಲವರ ನಡುವೆ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಹಿಂದೂ ಮುಸ್ಲಿಂ ಧರ್ಮದ ನಡುವೆ ವಿಷ ಬೀಜ ಬಿತ್ತುವ ಹಲವಾರು ಜನರ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾನವೀಯತೆಗೆ ಸಾಕ್ಷಿಯಾಗುವ ಇಂತಹಾ ಕಾರ್ಯಗಳು ನಡೆಯುತ್ತಲೇ ಇರುವುದು ಬುದ್ಧಿವಂತರ ಜಿಲ್ಲೆಗೆ ಹೆಮ್ಮೆ ತರುತ್ತಿದೆ.
#ಸಜಿಪ_ಅಬ್ದುಲ್_ಖಾದರ್_ಹಾಜಿ_ಫ್ಯಾ ಮಿಲಿ_ಅಸೋಸಿಯೇಷನ್ ನ ಈ ಮಾನವೀಯತೆಯ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.





