


ವಿಟ್ಲ ಪೋಲೀಸ್ ಠಾಣೆಯ ಸಿಬ್ಬಂದಿಗೆ ಮೇ.24ರಂದು ದೃಢ ಪಟ್ಟಿದ್ದ ಕರೊನಾ ಈಗ ನಿವಾರಣೆಯಾಗಿ ಆಸ್ಪತ್ರೆಯಿಂದ ಮನೆಗೆ ಕಳುಹಿಸುವ ಕಾರ್ಯ ಭಾನುವಾರ ನಡೆದಿದೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೇ.15ರಂದು ವಿಟ್ಲಕ್ಕೆ ಆಗಮಿಸಿ ಠಾಣೆಯ ಮೆಟ್ಟಲು ಏರಿದ್ದ ಮಹಾರಾಷ್ಟ್ರ ರಾಯಗಡದಿಂದ ಆಗಮಿಸಿದ ವ್ಯಕ್ತಿಗೆ ಸೋಂಕು ದೃಢ ವಾಗುತ್ತಿದ್ದಂತೆ ವಿಟ್ಲದ 5 ಸಿಬ್ಬಂದಿಗಳ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಸಂದರ್ಭ ಓರ್ವ ಸಿಬ್ಬಂದಿಯದ್ದು ಕರೊನಾ ಧನಾತ್ಮಕ ಎಂಬ ವರದಿ ಮೇ.24ರಂದು ಆಗಮಿಸಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯ ನಡೆದಿತ್ತು. ಬಳಿಕ ಮೇ.29ರಂದು ಅವರ ಗಂಟಲ ದ್ರವ ಸಂಗ್ರಹಣೆ ಮಾಡಿದ್ದು, ಮೇ.31ರಂದು ವರದಿಯಲ್ಲಿ ಋಣಾತ್ಮಕ ಎಂದು ಬಂದಿದೆ. ಇದರಿಂದ ಅವರನ್ನು ಮನೆಗೆ ಕಳುಹಿಸಿದ್ದು, 14ದಿನಗಳ ಕಾಲ ಗೃಹ ದಿಗ್ಬಂಧನ ವಿಧಿಸಲಾಗಿದೆ. ಈ ಬಗ್ಗೆ ಪೋಲೀಸ್ ಸಿಬ್ಬಂದಿಯೇ ಮಾಹಿತಿ ನೀಡಿದ್ದಾರೆ.





