ಬೆಳ್ತಂಗಡಿ: ಕ್ವಾರಂಟೈನ್ ನಲ್ಲಿ ಇದ್ದ ಅರು ಮಂದಿಗೆ ಪಾಸಿಟಿವ್ ವರದಿ ಬಂದಿದ್ದು, ಬೆಳ್ತಂಗಡಿಯಲ್ಲಿ ಕೊರೊನಾ ಭೀತಿ ಮತ್ತಷ್ಟು ಹೆಚ್ಚಾಗಿದೆ.
ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಲ್ಯ ಶಾಲೆಯಲ್ಲಿ ಮುಂಬೈನಿಂದ ಬಂದಿರುವ ಒಂದೇ ಕುಟುಂಬದ 10 ಜನರ ಪೈಕಿ 45 ವರ್ಷದ ಮಹಿಳೆ ಮತ್ತು 43 ವರ್ಷದ ಪುರುಷನಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.
ಸುಲ್ಕೇರಿ ಶ್ರೀ ರಾಮ ಶಾಲೆಯಲ್ಲಿ ಮೇ 24ರಂದು ಮುಂಬೈನಿಂದ ಬಂದ 6 ಜನರಲ್ಲಿ ಒಬ್ಬರಿಗೆ ಪಾಸಿಟಿವ್ ಬಂದಿದೆ.
ನಾರಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾರಾವಿ ಸರಕಾರಿ ಪ್ರೌಢ ಶಾಲೆಯಲ್ಲಿ ಮುಂಬೈನಿಂದ ಆಗಮಿಸಿದ 6 ಜನರಲ್ಲಿ 28 ವರ್ಷ ಮತ್ತು 42 ವರ್ಷದ ಇಬ್ಬರು ಪುರುಷರ ವರದಿ ಪಾಸಿಟಿವ್ ಬಂದಿದೆ.
ಕೊರೊನಾ ಎಲ್ಲೆಡೆ ಹಬ್ಬುತಿದ್ದು, ಪಾಸಿಟಿವ್ ವರದಿ ಬಂದಿರುವವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಕೊರೊನಾ ಆಸ್ಪತ್ರೆಗೆ ದಾಖಲಿಸಲಾಗಿದೆ.