ಕಾಸರಗೋಡು: ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಎಸ್ ಸಾಬುರವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದ್ದು, ಬದಲಿಗೆ ಕರ್ನಾಟಕ ಮೂಲದ ಡಿ ಶಿಲ್ಫಾ ರವರನ್ನು ನೇಮಿಸಲಾಗಿದೆ. ಶಿಲ್ಪಾ ಜಿಲ್ಲೆಯ ಪ್ರಥಮ ಮಹಿಳಾ ಎಸ್.ಪಿಯಾಗಿದ್ದಾರೆ.

ಮಾರ್ಚ್ ತಿಂಗಳಲ್ಲಿ ಸಾಬು ರವರನ್ನು ಕಾಸರಗೋಡು ಎಸ್.ಪಿಯನ್ನಾಗಿ ನಿಯುಕ್ತಿಗೊಳಿಸಲಾಗಿತ್ತು. ಇದೀಗ ಅವರನ್ನು ಆಲಪ್ಪುಝಕ್ಕೆ ವರ್ಗಾಯಿಸಲಾಗಿದೆ.

ಡಿ.ಶಿಲ್ಪಾ ಈ ಹಿಂದೆ ಕಾಸರಗೋಡು ಎ. ಎಸ್. ಪಿ. ಯನ್ನಾಗಿ ಕಾರ್ಯನಿರ್ವಹಿಸಿದ್ದರು. 2019 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಣ್ಣೂರು ಎ ಎಸ್ ಪಿ ಯಾಗಿ ಕಾರ್ಯನಿರ್ವಹಿಸಿದ್ದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here