ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಮನೆ ಒಡ್ಡೂರಿನಲ್ಲಿ ತಂತ್ರಿ ವರ್ಗ ಮತ್ತು ದೈವದ ಚಾಕರಿ ವರ್ಗದ ವರಿಗೆ ಗೌರವಧನ ನೀಡಲಾಯಿತು.
ಕೊರೊನಾ ಸಂಕಷ್ಟದಿಂದ ಲಾಕ್ ಡೌನ್ ಅವಧಿಯಲ್ಲಿ ದೈವರಾಧನೆಯ ಕೆಲಸ ಮಾಡುವ ಚಾಕರಿಯವರಿಗೆ ಸಾಕಷ್ಟು ತೊಂದರೆಯಾಗಿದೆ ಎಂದು ಅವರ ಜೀವನಕ್ಕೆ ಆಧಾರವಾಗಲಿ ಎಂಬ ಹಿನ್ನೆಲೆಯಲ್ಲಿ ಇಂದು ಒಡ್ಡೂರಿನಲ್ಲಿ ದೈವದ ಚಾಕರಿ ಕೆಲಸದವರಿಗೆ ಗೌರವ ಧನ ಹಾಗೂ ಆಹಾರದ ಕಿಟ್ ನೀಡಲಾಯಿತು.


ಒಡ್ಡೂರು ದೇವಸ್ಥಾನದ ವಾರ್ಷಿಕ ನೇಮೋತ್ಸವ ಕೊರೊನಾ ಮಹಾಮಾರಿಯ ಕಾರಣದಿಂದಾಗಿ ನಡೆಯಲಿಲ್ಲ.
ಈ ಹಿನ್ನೆಲೆಯಲ್ಲಿ ಇಂದು ಒಡ್ಡೂರ ದೈವಸಾನಿದ್ಯದಲ್ಲಿ ವರ್ಷಾವದಿಯಲ್ಲಿ ಸೇವೆ ಸಲ್ಲಿಸುವ ದೈವನರ್ತಕರಿಗೆ, ದೈವ ಪರಿಚಾರಕರಾದ ಮುಕಾಲ್ದಿ, ಜೀಟಿಗೆ ಹಿಡಿಯುವವರು, ಧಾರ್ಮಿಕ ಕಾರ್ಯ ನಡೆಸುವ ತಂತ್ರಿವರ್ಯರಿಗೆ, ವಾಲಗದವರಿಗೆ ಗೌರವಧನ ಹಾಗೂ ಆಹಾರದ ಕಿಟ್ ನೀಡಲಾಯಿತು.
ತುಳುನಾಡಿನಲ್ಲಿ ದೈವರಾಧನೆಯ ನಂಬಿಕೆಯ ಆಧಾರದ ಮೇಲೆ ಜೀವನಸಾಗಿಸುವ ಜೊತೆಗೆ ಅದನ್ನೇ ನಂಬಿ ದೈವದ ಕೆಲಸ ಮಾಡಿ ಬದುಕುವ ಅದೆಷ್ಟೋ ಕುಟುಂಬಗಳಿವೆ, ಅವರಿಗೆ ಲಾಕ್ ಡೌನ್ ನಿಂದಾಗಿ ತೊಂದರೆ ಯಾಗಿದೆ.
ಪ್ರತಿ ಗ್ರಾಮದಲ್ಲಿ ದೈವದ ಚಾಕರಿ ಮಾಡುವ ಕುಟುಂಬಗಳಿಗೆ ನೆರವು ನೀಡುವ ಕೆಲಸಗಳು ಆದರೆ ಅವರ ಜೀವನಕ್ಕೆ ಆಧಾರವಾಗಬಹುದು ಎಂಬ ನಿಟ್ಟಿನಲ್ಲಿ ಒಡ್ಡೂರಿನಲ್ಲಿ ಕಾರ್ಯಕ್ರಮ ಮಾಡಲಾಗಿದೆ.
ಈ ಸಂದರ್ಭದಲ್ಲಿ ಬೂಡಾ ಅಧ್ಯಕ್ಷ ದೇವದಾಸ್ ಶೆಟ್ಟಿ , ಕೃಷ್ಣರಾಜ್ ಮಾರ್ಲ ಮುತ್ತೂರು, ಪಲ್ಕೆ ರತೀಶ್ ಭಟ್, ಗುರುರಾಜ್ ಭಟ್, ಉಮೇಶ್ ಅರಳ, ಅಭಿಲಾಷ್ ಚೌಟ, ಉಮೇಶ್ ಪಂಬದ, ನಾಗೇಶ್ ಶೇರಿಗಾರ್, ಪವನ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here