ಫರಂಗಿಪೇಟೆ: ಕಟ್ಟಡವೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಗಲಿ ಓರ್ವ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಫರಂಗಿಪೇಟೆಯ ಪೇರಿಮಾರ್ ಎಂಬಲ್ಲಿ ಇದೀಗ ನಡೆದಿದೆ.
ಅಮ್ಮೆಮಾರ್ ನಿವಾಸಿ, ಇಲೆಟ್ರಿಷನ್ ಮುಬಾರಕ್ (23) ಮೃತ ವ್ಯಕ್ತಿಯಾಗಿದ್ದು, ಫಾರೂಕ್ ಗಾಯಾಳು. ಫಾರೂಕ್ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಮ್ಮೆಮಾರ್ ಜಲಾಲಿಯ ನಗರದಲ್ಲಿ ಕಟ್ಟಡವೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ವೇಳೆ ನೆಲದಲ್ಲಿ ತುಂಡರಿಸಿ ಬಿದ್ದಿದ್ದ ವೈರ್ ನ್ನು ಆಕಸ್ಮಿಕವಾಗಿ ತಗಲಿದೆ ಎನ್ನಲಾಗಿದೆ.