ಬೆಂಗಳೂರು, ಮೇ 30: ರಾಜ್ಯದಲ್ಲಿ ಮೇ.30ರ ಶನಿವಾರದಿಂದ ಕೋವಿಡ್-19 ಅಪ್ಡೇಟ್ ಬಗ್ಗೆ ಬೆಳಗಿನ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಹೇಳಿದ್ದಾರೆ.

ಈ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಿಂದಿನಿಂದಲೂ ಕೋವಿಡ್-19 ಅಪ್ಡೇಟ್ ಬಗ್ಗೆ ದಿನಕ್ಕೆ ಎರಡು ಬಾರಿ ಹೆಲ್ತ್ ಬುಲೆಟಿನ್ ಮಾಡಲಾಗುತ್ತಿತ್ತು. ಸದ್ಯ ಕೊರೊನಾ ಟಾಸ್ಕ್ ಫೋರ್ಸ್ ಸಲಹೆಯಂತೆ ರಾಜ್ಯ ಸರ್ಕಾರ ಇನ್ಮುಂದೆ, ಒಟ್ಟಾರೆಯಾಗಿ ಸಂಜೆ ಮಾತ್ರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುತ್ತದೆ ಎಂದಿದ್ದಾರೆ.

ಈ ಹಿಂದೆ ಮಧ್ಯಾಹ್ನ 12 ಗಂಟೆ ವೇಳೆಗೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗುತ್ತಿತ್ತು. ಆ ಬಳಿಕ ಮಧ್ಯಾಹ್ನ 1 ಗಂಟೆ ವೇಳೆಗೆ ಮಾಹಿತಿ ನೀಡಲಾಗುತ್ತಿತ್ತು. ಆದರೆ ಮಧ್ಯಾಹ್ನದ ವೇಳೆ ಎಲ್ಲಾ ಮಾಹಿತಿಯನ್ನೂ ಹುಡುಕುವಲ್ಲಿ ಇಲಾಖೆ ಕೆಲ ಸಂಕಷ್ಟಗಳು ಎದುರಾಗುತ್ತಿವೆ ಎಂದಿರುವ ಸರ್ಕಾರ ಅಂತಿಮವಾಗಿ ಬೆಳಗಿನ ಹೆಲ್ತ್ ಬುಲೆಟಿನ್ ನೀಡುವುದನ್ನೇ ನಿಲ್ಲಿಸಿದ್ದು, ಒಟ್ಟಾರೆ ಸಂಜೆ ವೇಳೆಯೇ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here