ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮೇ. 30 ಶನಿವಾರದಂದು ಒಂದು ವರ್ಷ ಪೂರೈಸಿದ್ದು ಆದರೆ ಕೊರೊನಾ ಲಾಕ್‌ಡೌನ್‌ ಇರುವ ಕಾರಣದಿಂದಾಗಿ ಬಿಜೆಪಿ ಪಕ್ಷಕ್ಕೆ ಬಹಿರಂಗವಾಗಿ ಯಾವುದೇ ಸಂಭ್ರಮಾಚರಣೆ ಮಾಡಲು ಸಾಧಯವಾಗುತ್ತಿಲ್ಲ,. ಆದರೆ ಇದಕ್ಕೆ ಪರಿಹಾರ ಕಂಡು ಕೊಂಡಿರುವ ಬಿಜೆಪಿ ಪಕ್ಷವು ಮುಂದಿನ ಒಂದು ತಿಂಗಳ ಕಾಲ ಫೇಸ್‌ಬುಕ್‌ ಲೈವ್‌ನಂಥ ವರ್ಚುವಲ್‌ ರ್‍ಯಾಲಿ ಮಾಡಲು ಯೋಜನೆ ರೂಪಿಸಿದೆ.

ಈ ಡಿಜಿಟಲ್‌ ರ್‍ಯಾಲಿ ಮೂಲಕವಾಗಿ ಬಿಜೆಪಿಯು ತನ್ನ ಪಕ್ಷಕ ಕಾಯಕರ್ತರನ್ನು ತಲುಪಲು ಯೋಜಿಸಿದ್ದು ಈ ಸಂದರ್ಭದಲ್ಲೇ ವಿರೋಧ ಪಕ್ಷಗಳ ಆರೋಪಗಳ ತೀವ್ರಗೊಳ್ಳುತ್ತಿದೆ.

ವಿರೋಧ ಪಕ್ಷಗಳು ಪ್ರಸ್ತುತ ಜಾರಿಯಲ್ಲಿರುವ ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ದೇಶದಲ್ಲಿ ವಲಸೆ ಕಾರ್ಮಿಕರಿಗೆ ಉಂಟಾಗುತ್ತಿರುವ ಸಮಸ್ಯೆ, ಹೆಚ್ಚುತ್ತಿರುವ ನಿರುದ್ಯೋಗ ಮೊದಲಾದವುಗಳ ವಿಚಾರದಲ್ಲಿ ಆರೋಪ, ಟೀಕೆಗಳನ್ನು ಮಾಡುತ್ತಿದ್ದು ಈ ಸಂದರ್ಭದಲ್ಲೇ ಬಿಜೆಪಿಯು ಕಿರು ಪುಸ್ತಕವೊಂದನ್ನು ಬಿಡುಗಡೆ ಮಾಡಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here