


ಬೆಳ್ತಂಗಡಿ: ಯುವವಾಹಿನಿ (ರಿ) ಘಟಕದ ವತಿಯಿಂದ ಇಂದು ಕನ್ಯಾಡಿ ಶ್ರೀ ರಾಮಕ್ಷೇತ್ರಕ್ಕೆ ಸ್ಯಾನಿಟೈಸರ್ ಯಂತ್ರ ಹಸ್ತಾಂತರಿಸಲಾಯಿತು.
ಪ್ರತೀ ಬಾರಿ ಕೈ ತೊಳೆಯುವುದು, ಸ್ಯಾನಿಟೈಸ್ ಮಾಡಿಕೊಳ್ಳುವುದು ಅಗತ್ಯವಾಗಿರಿವುದರಿಂದ ಸ್ಯಾನಿಟೈಸರ್ ಯಂತ್ರವನ್ನು ಹಸ್ತಾಂತರಿಸಲಾಗಿದೆ.
ನಂತರ ಕನ್ಯಾಡಿ ಶ್ರೀ ರಾಮಕ್ಷೇತ್ರದ ಸ್ವಾಮೀಜಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಿ, ಕೊರೊನಾ ಎಂಬ ಮಹಾಮಾರಿಯಿಂದ ಇಡೀ ಪ್ರಪಂಚವೇ ಮುಕ್ತಿ ಹೊಂದಲಿ. ಸಾರ್ವಜನಿಕರಿಗೆ ಮತ್ತಷ್ಟು ಜಾಗೃತಿ ಮೂಡಿಸುವ ಕೆಲಸವಾಗಲಿ ಎಂದು ಸಂದೇಶ ನೀಡಿದರು.
ಈ ಸಂಧರ್ಭದಲ್ಲಿ ಬೆಳ್ತಂಗಡಿ ಯುವವಾಹಿನಿ (ರಿ) ಘಟಕದ ಅದ್ಯಕ್ಷ ಎಂ.ಕೆ. ಪ್ರಸಾದ್, ಉಪಾಧ್ಯಕ್ಷ ದೇವಿಪ್ರಸಾದ್ ಬರೆಮೇಲು, ಕಾರ್ಯದರ್ಶಿ ಗುರುರಾಜ್ ಗುರಿಪಳ್ಳ, ಕೋಶಾಧಿಕಾರಿ ಸಂತೋಷ್ ಕಾಶಿಬೆಟ್ಟು, ಘಟಕದ ನಿರ್ಧೇಶಕ ಉದಯ್ ಬಂಗೇರ ನಾವೂರು, ಸಂಘಟನಾ ಕಾರ್ಯದರ್ಶಿಗಳಾದ ಸುರೇಂದ್ರ ಕೋಟ್ಯಾನ್, ಯಶೋಧರ ಮುಂಡಾಜೆ, ಘಟಕದ ಸಲಹೆಗಾರರಾದ ರವಿಕುಮಾರ್ ಬರೆಮೇಲು, ಪ್ರಶಾಂತ್ ಜಶನ್, ಪುರುಷೋತ್ತಮ ಧರ್ಮಸ್ಥಳ, ಉಮನಾಥ್ ಕೋಟ್ಯಾನ್ ಬೆಳಾಲು,ಯುವವಾಹಿನಿ ಕೇಂದ್ರ ಸಮಿತಿಯ ನಿರ್ದೇಶಕ ಪ್ರಶಾಂತ್ ಮಚ್ಚಿನ, ಶಿವ ಕುಲಾಲ್ ಪಡಂಗಡಿ ಉಪಸ್ಥಿತರಿದ್ದರು.






