ಬಂಟ್ವಾಳ: ಬಂಟ್ವಾಳ ತಾಲೂಕಿನ ಆಶಾಕಾರ್ಯಕರ್ತೆಯರಿಗೆ ಸರಕಾರದ ಆಯುಷ್ಯ ಇಲಾಖೆಯ ವತಿಯಿಂದ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ! ಮಣಿಕರ್ಣಿಕ ಇವರ ನೇತ್ರತ್ವದ ಲ್ಲಿ ಆರ್ಯವೇದದಲ್ಲಿ ಶ್ರೇಷ್ಟವಾದ ಚ್ಯವನಪ್ರಾಶ ಲೇಹ್ಯವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶಾಸಕ ರ ಕಚೇರಿಯಲ್ಲಿ ಸಾಂಕೇತಿಕವಾಗಿ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಚ್ಯವನಪ್ರಾಶ ಲೇಹ್ಯವು ಆರ್ಯುವೇದ ದಲ್ಲಿ ಉಲ್ಲೇಖವಾಗಿರುವಂತೆ ಶ್ರೇಷ್ಠ ರಸಾಯನ. ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ದಿವ್ಯೌಷದ.
ಈಗಾಗಲೇ ಕೊರೊನಾ ವಿರುದ್ದ ಹಗಲಿರುಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಉದ್ದೇಶ ದಿಂದ ಚ್ಯವನಪ್ರಾಶನವನ್ನು ವಿತರಿಸುವ ಉತ್ತಮ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ.
ಬಂಟ್ವಾಳ ತಾಲೂಕಿನಲ್ಲಿ ಇಂದಿನಿಂದ ಒಟ್ಟು 351 ಆಶಾಕಾರ್ಯಕರ್ತೆಯರಿಗೆ ಆಯುಷ್ ಇಲಾಖೆಯ ವತಿಯಿಂದ ಕಾರ್ಯಕ್ರಮ ನಡೆಯುತ್ತದೆ.
ಚ್ಯವನಪ್ರಾಶದಲ್ಲಿ ನೆಲ್ಲಿಕಾಯಿ, ಅಮೃತಬಳ್ಳಿ, ಆಶ್ವಗಂಧ, ಯಷ್ಟಿಮಧು ಜೇನು ತುಪ್ಪ, ತುಪ್ಪ ಇತ್ಯಾದಿ ಜೀವನೀಯ ಅಷ್ಟವರ್ಗ ದ್ರವ್ಯಗಳನ್ನೊಳಗೊಂಡಿದ್ದು, ಆರೋಗ್ಯವಂತ ಮಾನವನ ಶರೀರದಲ್ಲಿ ಯಾವುದೇ ರೋಗ ಬಾರದಂತಹ ರೋಗನಿರೋಧಕ ಶಕ್ತಿಯನ್ನು ವೃದ್ದಿಸುವ ಔಷಧ ಎಂದು ಡಾ.! ಮಣಿಕರ್ಣಿಕ ಅವರು ತಿಳಿಸಿದ್ದಾರೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here