ಮಂಗಳೂರು: ಮಂಗಳೂರಿನ ಮೂಳೂರು ಗ್ರಾಮದ ಬರ್ಕೆ ಪ್ರದೇಶದಲ್ಲಿ ಕೊರೊನಾ ಪಾಸಿಟಿವ್ ಕೇಸ್ ದಾಖಲಾದ ಹಿನ್ನೆಲೆಯಲ್ಲಿ ಮೂಳೂರು ಗ್ರಾಮದ ಬರ್ಕೆ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.

ಈ ಬಗ್ಗೆ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸ್ಪಷ್ಟ ಆದೇಶ ಹೊರಡಿಸಿದ್ದಾರೆ. ಇನ್ನು ಈ ಪ್ರದೇಶದಲ್ಲಿರುವ ಖಾಲಿ ಜಮೀನು ಸೀಲ್ ಡೌನ್ ಪ್ರದೇಶದೊಳಗೆ ಒಳಪಡಲಿದೆ.

ಇನ್ನು ಬಫರ್ ಝೋನ್ ಪ್ರದೇಶದಲ್ಲಿ ಪೂರ್ವದಿಂದ ಗುರುಪುರ ನದಿ, ಪಶ್ಚಿಮದಲ್ಲಿ ಕಂದಾವರ ಗ್ರಾಮ, ಉತ್ತರದಲ್ಲಿ ಅಡ್ಡೂರು ಗ್ರಾಮ ಹಾಗೂ ದಕ್ಷಿಣದಲ್ಲಿ ತೆಂಕುಲಿಪಾಡಿ ಗ್ರಾಮ ಒಳಪಡಲಿದೆ. ಇನ್ನು ಈ ಭಾಗದಲ್ಲಿ 1808 ಮನೆಗಳಿವೆ. 467 ಅಂಗಡಿಗಳು ಹಾಗೂ ಕಚೇರಿಗಳಿವೆ. 5445 ಮಂದಿ ಜನ ವಾಸವಾಗಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here