ಮಂಗಳೂರು: ಉಳ್ಳಾಲದ ಸಮುದ್ರದಲ್ಲಿ ಮುಳುಗುತ್ತಿರುವ ಮುಸ್ಲಿಂ ಮಹಿಳೆಯನ್ನು ವಿಕ್ರಂ ಪುತ್ರನ್ ಹಾಗೂ ಕುನಾಲ್ ಅಮೀನ್ ಎಂಬ ಇಬ್ಬರು ಯುವಕರು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸಿದ್ದಾರೆ.
ವಿಕ್ರಂ ಪುತ್ರನ್ ಹಾಗೂ ಕುನಾಲ್ ಅಮೀನ್ ಇಬ್ಬರೂ ಕರ್ನಾಟಕ
ರಾಜ್ಯ ಪ್ರಶಸ್ತಿ ಹಾಗೂ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶಿವಾಜಿ ಜೀವರಕ್ಷಕ ಯುವಕ ಮಂಡಲ, ಮೊಗವೀರ ಪಟ್ಣ ಉಳ್ಳಾಲ ಇದರ ಸದಸ್ಯರು.
ತುಳುನಾಡಿನಲ್ಲಿ ಮಾನವೀಯತೆ ಎಂಬುವುದು ಧರ್ಮಕ್ಕೆ ಮೀರಿದ ವಿಚಾರ. ಅಗತ್ಯ ಬಂದಾಗ ಮುಸಲ್ಮಾನರು ಹಿಂದೂಗಳನ್ನು , ಹಿಂದುಗಳು ಮುಸಲ್ಮಾನರನ್ನು ಧರ್ಮ ನೋಡದೆ ಮಾನವೀಯತೆ ಆಧಾರದ ಮೇಲೆ ರಕ್ಷಿಸುವುದು ಸಂಪ್ರದಾಯ ಎಂದು ಹೇಳಿದ್ದಾರೆ.

ಮೇ. 24 ರಂದು ಪಾಣೆಮಂಗಳೂರು ಬಳಿ ನೇತ್ರಾವತಿ ನದಿಗೆ ಹಾರಿದ ಕಲ್ಲಡ್ಕದ 19 ವರ್ಷದ ನಿಶಾಂತ್ ಎಂಬ ಯುವಕನನ್ನು ಮುಸ್ಲಿಂ ಯುವಕರು ಪ್ರಾಣದ ಹಂಗು ತೊರೆದು ರಕ್ಷಿಸಿಲು ಯತ್ನಿಸಿದ್ದರು. ಆದರೆ, ಪ್ರಥಮ ಚಿಕಿತ್ಸೆಗೆ ಸ್ಪಂದಿಸದೆ ನಿಶಾಂತ್ ಮೃತಪಟ್ಟಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here