ಬಂಟ್ವಾಳ: ರಾಜ್ಯದಲ್ಲಿ ಇಂದು ಒಟ್ಟು 248 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 2781ಕ್ಕೆ ಏರಿಕೆಯಾಗಿದೆ.
ಬೆಳಿಗ್ಗೆ 178 ಕೇಸ್ ಪತ್ತೆಯಾಗಿದ್ದು, ಸಂಜೆಯ ಹೆಲ್ತ್ ಬುಲೆಟಿನ್ ನಲ್ಲಿ ಮತ್ತೇ 70 ಕೇಸ್ ಪತ್ತೆಯಾಗಿದೆ.
ರಾಯಚೂರು 62, ಕಲಬುರಗಿ 61, ಯಾದಗಿರಿ 60, ಉಡುಪಿ, 15, ಬೆಂಗಳೂರು 13, ಬಳ್ಳಾರಿ 9, ಚಿಕ್ಕಬಳ್ಳಾಪುರ 5, ದಾವಣಗೆರೆ, ಹಾಸನ, ವಿಜಯಪುರ ತಲಾ 4, ಮಂಡ್ಯ, ಮೈಸೂರು, ಚಿಕ್ಕಮಗಳೂರು, ತುಮಕೂರು ತಲಾ 2, ಧಾರವಾಡ, ಚಿತ್ರದುರ್ಗ, ಶಿವಮೊಗ್ಗ ತಲಾ 1 ಕೇಸ್ ಪತ್ತೆಯಾದ ಬಗ್ಗೆ ಇಂದು ಸಂಜೆಯ ಬುಲೆಟಿನ್ ನಲ್ಲಿ ವರದಿಯಾಗಿದೆ.
ರಾಜ್ಯದಲ್ಲಿ ಇಂದು ಕೊರೋನಾ ಸೋಂಕಿಗೆ ಚಿಕ್ಕಬಳ್ಳಾಪುರದ 50 ವರ್ಷದ ಮಹಿಳೆ ಬಲಿಯಾಗಿದ್ದು, ಸಾವಿನ ಸಂಖ್ಯೆ 48ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಇಂದು ಒಟ್ಟು 60 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 894 ಮಂದಿ ಸೋಂಕಿನಿಂದ ಮುಕ್ತರಾಗಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here