Wednesday, October 18, 2023

ಬಹು ರಾಷ್ಟ್ರೀಯ ಕಂಪನಿಗಳಿಗೆ ಆಹ್ವಾನ ನೀಡುವ ಎಪಿಎಂಸಿ ಕಾಯ್ದೆಯನ್ನು ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ಮನವಿ

Must read

ಬೆಳ್ತಂಗಡಿ: ಕೊರೋನಾ ವೈರಸ್ ಲಾಕ್ ಡೌನ್ ನ ನಡುವೆಯೂ ರಾಜ್ಯ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳಿಗೆ ಆಹ್ವಾನ ನೀಡುವ ಎಪಿಎಂಸಿ ಕಾಯ್ದೆಗೆ ಸುಗ್ರಿವಾಜ್ಞೆಯನ್ನು ಜಾರಿಗೊಳಿಸಿರುವುದನ್ನು ವಾಪಸ್ ಪಡೆಯಲು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್ ವಾದಿ) ಸಿಪಿಐ(ಎಂ) ನ ನೇತೃತ್ವದಲ್ಲಿ ಶುಕ್ರವಾರ ಬೆಳ್ತಂಗಡಿ ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಬಂಡವಾಳಗಾರರು ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಗೆ ಕಾರ್ಮಿಕ ಕಾಯ್ದೆಗಳಿಂದ ವಿನಾಯಿತಿ ನೀಡುವ ಮತ್ತು ಕಾರ್ಮಿಕರ ದುಡಿಮೆಯ ಅವಧಿಯನ್ನು ಹೆಚ್ಚಿಸಬಾರದು, ಪ್ರತಿಗಾಮಿ ವಿದ್ಯುತ್ಚಕ್ತಿ ಮಸೂದೆ 2020 ಹಿಂಪಡೆಯಬೇಕು, ಗ್ರಾಮ ಪಂಚಾಯತ್ ಗಳಿಗೆ ಆಡಳಿತ ಸಮಿತಿಗಳನ್ನು ನೇಮಕ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು, ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾದ ದಿನನಿತ್ಯದ ದುಡಿಮೆಯನ್ನು ಆಧಾರಿತ ಎಲ್ಲಾ ಬಡವರಿಗೆ, ರೈತರಿಗೆ,‌ ಕೃಷಿ ಕೂಲಿಕಾರರು ಹಾಗೂ ಕಾರ್ಮಿಕರಿಗೆ ಲಾಕ್ ಡೌನ್ ಅವಧಿಯ ಮತ್ತು ಮುಂದಿನ 3 ತಿಂಗಳಿಗೆ ಅಗತ್ಯವಾದ ಸಮಗ್ರ ಆಹಾರ ಧಾನ್ಯಗಳನ್ನು ಹೊಂದಿದ ಆಹಾರ ಪಡಿತರ ಕಿಟ್ ಒದಗಿಸಬೇಕು, ಹಾಗೆ ಎಲ್ಲರಿಗೂ ಪ್ರತಿ ತಿಂಗಳು ತಲಾ ರೂ 7500 ಗಳ ನೆರವು ನೀಡಬೇಕು, ರೈತರ ಬೆಳೆ ನಷ್ಟ, ನಿರುದ್ಯೋಗ , ಆರ್ಥಿಕ ಸಂಕಷ್ಟದ ಕಾರಣದಿಂದ ರೈತರ, ಗೇಣಿದಾರರ , ಮಹಿಳೆಯರ ಸಾಲಗಳನ್ನು , ಮೈಕ್ರೋ ಸಂಸ್ಥೆಗಳ ಸಾಲಗಳನ್ನು ಮನ್ನಾ ಮಾಡಬೇಕು ಮತ್ತು ಬೆಳೆ ನಷ್ಟ ಪರಿಹಾರ ತಲಾ 10,000 ವನ್ನು ಪ್ರತಿ ಎಕರೆ ಜಮೀನಿಗೆ ನೀಡಬೇಕು , ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕಾರ್ಮಿಕರಿಗೆ ಲಾಕ್ ಡೌನ್ ಅವಧಿಯ ಬಾಕಿ ವೇತನವನ್ನು ಸರ್ಕಾರವೇ ಭರಿಸಬೇಕು ಮತ್ತು ಅವರಿಗೆ ಉದ್ಯೋಗ ಭದ್ರತೆ ಒದಗಿಸಬೇಕು , ಉದ್ಯೋಗವಿಲ್ಲದ ನಿರುದ್ಯೋಗಿಗಳಿಗೆ ಮಾಸಿಕ ವೇತನ ರೂ 10,000 ನಿರುದ್ಯೋಗ ಭತ್ಯೆ ನೀಡಬೇಕು , ನಗರದ ಬಡವರು ಸೇರಿದಂತೆ ಉದ್ಯೋಗ ಖಾತರಿ ಅಡಿಯಲ್ಲಿ ರಾಜ್ಯಾದ್ಯಂತ ವ್ಯಾಪಕ ಉದ್ಯೋಗವನ್ನು ಒದಗಿಸಬೇಕು , ಅಥಿತಿ ಉಪನ್ಯಾಸಕರ ಎಪ್ರಿಲ್ , ಮೇ ತಿಂಗಳ ಗೌರವ ಧನ ಕೂಡಲೇ ನೀಡಬೇಕು , ಕೈಗಾರಿಕಾ ವಿವಾದಗಳ ಕಾಯಿದೆಯ ಅಧ್ಯಾಯ 5(B) ಮಾಲೀಕರಿಗೆ ವಿನಾಯಿತಿ ನೀಡಬಾರದು , 100 ಜನಕ್ಕಿಂತಲೂ ಹೆಚ್ಚು ಕಾರ್ಮಿಕರು ಕೆಲಸ ಮಾಡುವ ಸಂಸ್ಥೆಗಳಲ್ಲಿ ಸರ್ಕಾರದ ಅನುಮತಿ ಇಲ್ಲದೆ ಲೇ-ಆಫ್, ರಿಟ್ರೆಂಚ್ಮೆಂಟ್ ಹಾಗೂ ಮುಚ್ಚಲು ಅವಕಾಶ ನೀಡಬಾರದು, ಕಾರ್ಮಿಕ ಕಾನೂನುಗಳನ್ನು ಅಮಾನತುಗೊಳಿಸಲು ನಡೆಯುತ್ತಿರುವ ಎಲ್ಲಾ ಪ್ರಯತ್ನಗಳನ್ನು ಕೈ ಬಿಡಬೇಕು, ಗುರುತಿಸಿರುವ ಅಸಂಘಟಿತ ಕಾರ್ಮಿಕರಿಗೆ ನೇರ ಆರ್ಥಿಕ ನೆರವು ನೀಡಬೇಕು, ಕೊರೋನಾ ಫ್ರಂಟ್ ಲೈನ್ ಕಾರ್ಮಿಕರಿಗೆ ರಕ್ಷಣೆ ಹಾಗೂ ಕೆಲಸದ ಭದ್ರತೆ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ನ್ಯಾಯವಾದಿ ಶಿವಕುಮಾರ್ ಎಸ್, ಎಂ , ತಾಲೂಕು ಸಮಿತಿ ಸದಸ್ಯರುಗಳಾದ ವಸಂತ ನಡ, ಶೇಖರ್ ಲಾಯಿಲ, ನ್ಯಾಯವಾದಿ ಸುಕನ್ಯಾ ಹೆಚ್, ರೈತ ಮುಖಂಡರಾದ ಸುಜೀತ್ ಉಜಿರೆ, ಸಾಂತಪ್ಪ ಗೌಡ ದಡ್ಡು, ಕಾರ್ಮಿಕ ಮುಖಂಡ ಕೃಷ್ಣ ನೆರಿಯ ಉಪಸ್ಥಿತರಿದ್ದರು.

More articles

Latest article