Wednesday, October 18, 2023

ಇಂಟರ್ನೆಟ್ ಕೇಬಲ್‌ ಕಳವು ಆರೋಪ: ಇಬ್ಬರು ಆರೋಪಿಗಳನ್ನು ಬಂಧಿಸಿದ ಗ್ರಾಮಾಂತರ ಎಸ್.ಐ.ಪ್ರಸನ್ನ

Must read

ಬಂಟ್ವಾಳ: ಇಂಟರ್ನೆಟ್ ಕೇಬಲ್ ಕಳವು ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ  ನೇತೃತ್ವದಲ್ಲಿ ದಾಳಿ ನಡೆಸಿ ದಸ್ತಗಿರಿ ಮಾಡಲಾಗಿದೆ. ಆರೋಪಿಗಳಿಂದ ಸಾವಿರಾರು ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಫರಂಗಿಪೇಟೆ ನಿವಾಸಿಗಳಾದ ಹರೀಶ್ ಮತ್ತು ಯೋಗೀಶ್ ಬಂಧಿತ ಆರೋಪಿಗಳು.

ಬಂಧಿತರಿಂದ 31ಸಾವಿರ ರೂ. ಮೌಲ್ಯದ ಇಂಟರ್ನೆಟ್ ಕೇಬಲ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ನೆತ್ತರಕೆರೆಯಿಂದ ಕೊಡ್ಮಾನ್ ವರೆಗಿನ ಸುಮಾರು 31 ಸಾವಿರ ಮೌಲ್ಯದ 3000 ಮೀ.ಉದ್ದದ ಇಂಟರ್ನೆಟ್ ಕೇಬಲ್ ನ್ನು ವಿದ್ಯುತ್ ಕಂಬದಿಂದ ಆರೋಪಿಗಳು ಮೇ. 23ನೇ ತಾರೀಖಿನಂದು ಕಳವು ಮಾಡಿದ್ದಾರೆ ಎಂದು ಡಿವೋಸ್ ಕಮ್ಯುನಿಕೇಶನ್ಸ್ ಪ್ರೈವೇಟ್ ಲಿಮಿಟೆಡ್ ನ ಮಾಲಕ ಸಂದರ್ಶ್ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ಮೇ.29 ಇಂದು ಬೆಳಿಗ್ಗೆ ದೂರು ನೀಡುತ್ತಾರೆ.
ಕೂಡಲೇ ಕಾರ್ಯ ಪ್ರವೃತ್ತರಾದ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್.ಐ.ಪ್ರಸನ್ನ ನೇತೃತ್ವದ ತಂಡ ಸಂಜೆಯ ವೇಳೆ ಇಬ್ಬರು ಆರೋಪಿಗಳನ್ನು ಬಂಧಿಸಿ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

More articles

Latest article