



ಬೆಳ್ತಂಗಡಿ: ಕುತ್ಲೂರು ಗ್ರಾಮದ ಕುಕ್ಕುಜೆ ಕ್ರಾಸ್’ನಿಂದ ರಾಷ್ಟ್ರೀಯ ಉದ್ಯಾನವನ ಅಲಂಬಕ್ಕೆ ಹೊಗುವ ರಸ್ತೆಯಲ್ಲಿರುವ ಕುಕ್ಕುಜೆ ಸೇತುವೆಯು ಸಂಪೂರ್ಣ ಕುಸಿದು ಬಿದ್ದಿದ್ದು ಜನರ ಸಂಪರ್ಕ ಕಡಿತಗೊಳ್ಳುವುದರೊಂದಿಗೆ ,ಮಳೆಗಾಲದ ಆತಂಕವೂ ಜನರಲ್ಲಿ ಹೆಚ್ಚಾಗಿದೆ.
ಸುಮಾರು ನಲವತ್ತೈದು ವರ್ಷ ಹಳೆಯದಾದ ಈ ಸೇತುವೆಯ ಪಿಲ್ಲರ್ ಒಂದು ವರ್ಷದ ಮುನ್ನವೇ ಕುಸಿದು ಬಿದ್ದಿದ್ದು, ಅಲ್ಲಿನ ವಾಹನ ಚಾಲಕರು ದಿನಾ ಭಯದೊಂದಿಗೆ ಪಯಣಿಸುತ್ತಿದ್ದರು. ಇದರ ದುರಸ್ತಿಯ ಬಗ್ಗೆ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ. ಸೇತುವೆ ಶಿಥಿಲಗೊಂಡಿರುವುದರಿಂದ ಈ ಭಾಗದ ಜನರಿಗೆ ಸಂಪರ್ಕ ಕಲ್ಪಿಸಲು ಗ್ರಾಮ ಪಂಚಾಯತ್ ನದಿಯಲ್ಲಿ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಿ ಕೊಟ್ಟಿತ್ತು.
ಮೇ 27 ರಂದು ಸಂಜೆ ಸೇತುವೆ ಸಂಪೂರ್ಣ ಕುಸಿದು ಬಿದ್ದು ಈ ಭಾಗದ ಜನರ ಸಂಪರ್ಕ ಕಡಿತಗೊಂಡಿದೆ.
ಘಟನಾ ಸ್ಥಳಕ್ಕೆ ಸ್ಥಳಿಯರು ಭೇಟಿ ನೀಡಿದ್ದಾರೆ.ಕೊರೊನಾ ಆತಂಕದ ನಡುವೆ ಕುಕ್ಕುಜೆ ಜನರು ಈ ಆತಂಕವನ್ನು ಎದುರಿಸುತ್ತಿದ್ದಾರೆ.






