


ಬಂಟ್ವಾಳ: ಕೊರೊನಾ ಲಾಕ್ ಡೌನ್ ನಡುವೆ ನಡೆದ ತಾ.ಪಂ.ವಿಶೇಷ ಸಾಮಾನ್ಯ ಸಭೆಯಲ್ಲಿ ತಾ.ಪಂ.ಸದಸ್ಯರ ಗದ್ದಲ ನಡೆಯಿತು. ತಾ.ಪಂ. ನ ಸುಮಾರು 90 ಲಕ್ಷ ಅನುದಾನ ವಾಪಾಸು ಹೋಗಿರುವ ಹಣಕ್ಕೆ ರಾಜ್ಯ ಸರಕಾರ ನೇರ ಕಾರಣ ಎಂದು ಕಾಂಗ್ರೆಸ್ ಸದಸ್ಯರು ಆರೋಪ ವ್ಯಕ್ತಪಡಿಸಿದ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಆರೋಪ ಪ್ರತ್ಯಾರೋಪಗಳು ನಡೆದು ಗದ್ದಲಕ್ಕೆ ಕಾರಣವಾಯಿತು. ಅಧಿಕಾರಿಯ ತಪ್ಪಿಗೆ ಸರಕಾರವನ್ನು ಹೊಣೆಗಾರಿಕೆ ಮಾಡುವುದು ಬೇಡ ಎಂದು ಸದಸ್ಯರು ಸಭೆಗೆ ತಿಳಿಸಿದರು. ತಾ.ಪಂ.ನಲ್ಲಿ ಈ ಅವಧಿಯಲ್ಲಿ ಪ್ರಥಮ ಬಾರಿ ಅನುದಾನ ವಾಪಾಸು ಹೋಗಿದೆ.
ಮಾ.12 ರಂದು ನೀಡಿದ ಬಿಲ್ ಯಾಕೆ ಪಾಸ್ ಆಗಿಲ್ಲ ಎಂದು ಖಜಾನೆ ಅಧಿಕಾರಿಯನ್ನು ಉಪಾಧ್ಯಕ್ಷ ಅಬ್ಬಾಸ್ ಆಲಿ ಪ್ರಶ್ನಿಸಿದರು.
ಮೇಲಾಧಿಕಾರಿಗಳ ನಿರ್ದೇಶನದಂತೆ ನಾನು ನಡೆದು ಕೊಂಡಿದ್ದೇನೆ, ಸರಕಾರದ ಹಾಗೂ ಹಿರಿಯ ಅಧಿಕಾರಿಗಳ ನಿಯಮದಂತೆ ಕಾನೂನು ಚೌಕಟ್ಟಿನ ಮೇಲೆ ನಾನು ಕೆಲಸ ಮಾಡಿದ್ದೇನೆ ಎಂದು ಅಧಿಕಾರಿ ಸಭೆಗೆ ತಿಳಿಸಿದರು.
ತಾ.ಪಂ.ಇ.ಒ. ಅವರೇ ಸಭೆಗೆ ಗೈರುಹಾಜರಾಗಿರುದ್ದಾರೆ ಹಾಗಾದರೆ ಸಭೆ ಯಾಕೆ ನಡೆಸಬೇಕಿತ್ತು ಎಂದು ಹಿರಿಯ ಸದಸ್ಯ ಉಸ್ಮಾನ್ ಕರೋಪಾಡಿ ಸಭೆಯ ಅಧ್ಯಕ್ಷರಿಗೆ ಪ್ರಶ್ನಿಸಿದರು. ಇ.ಒ. ಅವರಿಗೆ ಸರಕಾರದ ಅದೇಶದಂತೆ ಕಾರ್ಯಕ್ರಮಕ್ಕೆ ತೆರಳಲು ಅದೇಶ ಬಂದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಸಭೆಗೆ ಗೈರುಹಾಕರಾಗಿರುವ ಬಗ್ಗೆ ಅಧ್ಯಕ್ಷರು ಸ್ಪಷ್ಟನೆ ನೀಡಿದರು. ಸಭೆಯಲ್ಲಿ ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ ಉಪಸ್ಥಿತರಿದ್ದರು.
14 ನೇ ಹಣಕಾಸು ಗ್ರಾ.ಪಂ.ಗಳಿಗೆ ಈಗಾಗಲೇ ಕಳುಹಿಸಲಾಗಿದ್ದು, ಕೆಲವೊಂದು ಕಡೆಗಳಲ್ಲಿ ಬಿಲ್ ಪಾಸ್ ಅಗದೆ ಉಳಿದಿದೆ. ಅದೆಲ್ಲವನ್ನು ಒಂದು ವಾರದೊಳಗೆ ನೀಡುವಂತೆ ಆಧ್ಯಕ್ಷರು ಅಧಿಕಾರಿಗೆ ತಿಳಿಸಿದರು.





